ಕರ್ನಾಟಕ

karnataka

ನಾರಾಯಣಪುರ ಬಲದಂಡೆ ಮುಖ್ಯನಾಲೆ ಆಧುನೀಕರಣ: ಕಾಂಕ್ರೀಟ್​ ಲೈನಿಂಗ್​ ಕಳಪೆ ಕಾಮಗಾರಿ ಆರೋಪ

ನಾರಾಯಣಪುರ ಬಲದಂಡೆ ಮುಖ್ಯನಾಲೆ ಆಧುನೀಕರಣ ಕಾಮಗಾರಿ ಪೂರ್ಣಗೊಳ್ಳುವ ಮುಂಚೆಯೇ ಲೈನಿಂಗ್ ಕೊಚ್ಚಿ ಹೋಗಿ ಕಳಪೆ ಕಾಮಗಾರಿಯನ್ನು ಪ್ರದರ್ಶಿಸುತ್ತಿದ್ದು, ರೈತಪರ ಸಂಘಟನೆಗಳು ವಿಚಾರಣಾ ಸಂಸ್ಥೆಗಳಿಗೆ ದೂರು ಸಲ್ಲಿಸಿದರೂ ಯಾವೊಂದು ಸಂಸ್ಥೆಯು ತನಿಖೆ ನಡೆಸಲು ಮುಂದೆ ಬಂದಿಲ್ಲ.

By

Published : Mar 25, 2022, 1:16 PM IST

Published : Mar 25, 2022, 1:16 PM IST

Narayanapura Canal
ನಾರಾಯಣಪುರ ಬಲದಂಡೆ ಮುಖ್ಯನಾಲೆ ಕಾಂಕ್ರೀಟ್​ ಲೈನಿಂಗ್ ಕೊಚ್ಚಿ ಹೋಗಿರುವುದು

ರಾಯಚೂರು: ರಾಯಚೂರು ಜಿಲ್ಲೆಯ ರೈತರ ಜೀವನಾಡಿ ನಾರಾಯಣಪುರ ಬಲದಂಡೆ ಮುಖ್ಯನಾಲೆ ಆಧುನೀಕರಣ ಕಾಮಗಾರಿ ಪೂರ್ಣಗೊಳ್ಳುವ ಮುಂಚೆಯೇ 13ನೇ ಕಿಲೋ ಮೀಟರ್​ನಲ್ಲಿ ಲೈನಿಂಗ್ ಕೊಚ್ಚಿ ಹೋಗಿ ಕಳಪೆ ಕಾಮಗಾರಿ ಅನಾವರಣಗೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.

ಮುಖ್ಯನಾಲೆ ಅಧುನೀಕರಣಕ್ಕೆ ಪ್ರತಿ ಕಿಲೋ ಮೀಟರ್​ಗೆ 10 ಕೋಟಿಯಂತೆ 95 ಕಿಲೋ ಮೀಟರ್​ಗೆ ರೂ. 950 ಕೋಟಿ ರೂ. ಟೆಂಡರ್ ನೀಡಲಾಗಿದೆ. ಆಧುನೀಕರಣ ಕಾಮಗಾರಿ ನಂತರದಲ್ಲಿ ಕೊನೆ ಭಾಗದ ರೈತರಿಗೆ ಸಮರ್ಪಕ ನೀರು ಹರಿಯಬಹುದೆಂಬ ಕನಸು ಕಂಡಿದ್ದ ರೈತರಲ್ಲಿ ಇದೀಗ ಆತಂಕ ಸೃಷ್ಟಿಯಾಗಿದೆ.

ನಾರಾಯಣಪುರ ಬಲದಂಡೆ ಮುಖ್ಯನಾಲೆ ಅಧುನೀಕರಣ ಕಾಮಗಾರಿ

ಕಾಮಗಾರಿ ಆರಂಭದಲ್ಲಿಯೇ ರೈತಪರ ಸಂಘಟನೆಗಳು ಕಳಪೆ ಮರಳು ಬಳಕೆ, ಕಬ್ಬಿಣ ಸರಳು ಬಳಕೆ ಮಾಡದಿರುವುದು, ಕಾಂಕ್ರೀಟ್​ ಕಳಪೆ ಪ್ರಮಾಣ ಕುರಿತು ಲೋಕಾಯುಕ್ತ, ರಾಜ್ಯಪಾಲರು, ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರು ಸೇರಿದಂತೆ ವಿಚಾರಣ ಸಂಸ್ಥೆಗಳಿಗೆ ದೂರು ಸಲ್ಲಿಸುತ್ತಾ ಬಂದಿವೆ. ಯಾವೊಂದು ಸಂಸ್ಥೆಯು ತನಿಖೆ ನಡೆಸಲು ಮುಂದೆ ಬಂದಿಲ್ಲ.

ಆಧುನಿಕರಣ ಕಾಮಗಾರಿ ಪೂರ್ಣಗೊಳ್ಳುವ ಮುಂಚೆ ಅಲ್ಲಲ್ಲಿ ಲೈನಿಂಗ್ ಕೊಚ್ಚಿ ಹೋಗಿರುವ, ಕುಸಿತ, ಬಿರುಕು, ಮಣ್ಣಿನ ಏರಿಯ ವೀಕ್ಷಣಾ ರಸ್ತೆಗಳು ಕೊಚ್ಚಿ ಭೋಂಗಾ ಕಾಣಿಸಿಕೊಂಡ ಬಗ್ಗೆ ಕೃಷ್ಣ ಭಾಗ್ಯ ಜಲ ನಿಗಮ ಅಧಿಕಾರಿಗಳು ನೋಡಿಯು ನೋಡದಂತಿರುವುದು ವಿಪರ್ಯಾಸ.

ಇದನ್ನು ಓದಿ:ಮತೀಯ ಸಂಘರ್ಷಕ್ಕೆ ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ: ವರ್ತಕರಿಂದ ಪೊಲೀಸರಿಗೆ ದೂರು

ರಾಜ್ಯ ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ ಮಾತನಾಡಿ, ಸಾವಿರಾರು ಕೋಟಿ ಹಣ ಖರ್ಚು ಮಾಡಿ ಅಧುನೀಕರಣ ಹೆಸರಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಕುರಿತು ದೂರು ನೀಡಿದರೂ ಸರ್ಕಾರ ಕ್ರಮಕ್ಕೆ ಮುಂದಾಗುತ್ತಿಲ್ಲ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಸಂಸ್ಥೆಗಳು ಕ್ರಮ ಕೈಗೊಳ್ಳದಿರುವುದು ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯನಾಲೆ ಅಧುನೀಕರಣ ಹಂತದಲ್ಲಿಯೆ ಪುನಃ 13 ಮತ್ತು 12ನೇ ಕಿಲೋ ಮೀಟರ್​ನಲ್ಲಿ ಕೊಚ್ಚಿ ಹೋಗಿರುವ ಮಾಹಿತಿ ತಮಗಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗುತ್ತಿಗೆದಾರರಿಂದ ಪುನಃ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಎಇಇ ಮಲ್ಲಿಕಾರ್ಜುನಪ್ಪ ತಿಳಿಸಿದರು.

ABOUT THE AUTHOR

...view details