ಕರ್ನಾಟಕ

karnataka

ETV Bharat / state

ಲಾಕ್​​ಡೌನ್​ ಉಲ್ಲಂಘಿಸಿ ಮಸೀದಿಯಲ್ಲಿ ನಮಾಜ್.. ಊರ ಜನರಿಂದಲೇ ವಿರೋಧ - Namaz in mosque

ಶುಕ್ರವಾರ ರಾತ್ರಿ ನಮಾಜ್​ ಮಾಡಲು ಮುಸ್ಲಿಂ ಬಾಂಧವರು ಮುಂದಾದಾಗ ಗ್ರಾಮಸ್ಥರು ಆಕ್ಷೇಪಿಸಿದ್ದಾರೆ. ಅದಾವುದನ್ನೂ ಲೆಕ್ಕಿಸದೆ ನಮಾಜ್​ ಮಾಡಲು ಒಳಗಡೆ ಹೋಗಿದ್ದರು. ಆಗ ಮುಖ್ಯದ್ವಾರದ ಬಾಗಿಲು ಮುಚ್ಚಲು ಹೋದಾಗ ವಾಗ್ವಾದ ನಡೀತು.

Namaz in mosque
ಮಸೀದಿಯಲ್ಲಿ ನಮಾಜ್

By

Published : Apr 4, 2020, 11:46 AM IST

ರಾಯಚೂರು : ಲಾಕ್​​ಡೌನ್​ ನಿಯಮ ಉಲ್ಲಂಘಿಸಿ ಮಸೀದಿಯಲ್ಲಿ ನಮಾಜ್​ ಮಾಡಲು ಮುಂದಾಗಿರುವುದನ್ನು ಗ್ರಾಮಸ್ಥರು ಆಕ್ಷೇಪಿಸಿ ವಾಗ್ವಾದ ನಡೆಸಿದರು. ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸುಗೂರು ಮಸೀದಿಯಲ್ಲಿ ಧ್ವನಿವರ್ಧಕ ಬಳಸಿ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ಗ್ರಾಮಸ್ಥರು ವಿರೋಧಿಸಿದರು.

ಶುಕ್ರವಾರ ರಾತ್ರಿ ನಮಾಜ್​ ಮಾಡಲು ಮುಸ್ಲಿಂ ಬಾಂಧವರು ಮುಂದಾದಾಗ ಗ್ರಾಮಸ್ಥರು ಆಕ್ಷೇಪಿಸಿದ್ದಾರೆ. ಅದಾವುದನ್ನೂ ಲೆಕ್ಕಿಸದೆ ನಮಾಜ್​ ಮಾಡಲು ಒಳಗಡೆ ಹೋಗಿದ್ದರು. ಆಗ ಮುಖ್ಯದ್ವಾರದ ಬಾಗಿಲು ಮುಚ್ಚಲು ಹೋದಾಗ ವಾಗ್ವಾದ ನಡೀತು.

ಲಾಕ್​​ಡೌನ್​ ನಿಯಮ ಉಲ್ಲಂಘಿಸಿ ಮಸೀದಿಯಲ್ಲಿ ನಮಾಜ್..

ಗ್ರಾಮಸ್ಥರು, ಮುಸ್ಲಿಂ ಬಾಂಧವರ ಮಧ್ಯ ಸಂಘರ್ಷ ನಡೆಯುತ್ತಿರುವ ವಿಷಯ ತಿಳಿದು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಾತಾವರಣ ತಿಳಿಗೊಳಿಸಿದರು. ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಕೊರೊನಾ ಹರಡದಂತೆ ಎಲ್ಲಾ ಧರ್ಮೀಯರು ಮುಂದಾಗುವಂತೆ ಮನವಿ ಮಾಡಿದರು.

ABOUT THE AUTHOR

...view details