ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ತಾಲಿಬಾನ್​ ಸಂಸ್ಕೃತಿ ಸ್ಥಾಪನೆ ಶತಸಿದ್ಧ: ಪ್ರತಾಪ್ ಸಿಂಹ - pratap simha statement on priyank kharge

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಉತ್ತಮ ಆಡಳಿತ ನಡೆಯುತ್ತಿದೆ. ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ತಾಲಿಬಾನ್​ ಸಂಸ್ಕೃತಿಯ ಆಡಳಿತ ನಿರ್ಮಾಣವಾಗುತ್ತದೆ ಎಂದು ರಾಯಚೂರಿನಲ್ಲಿ ನಡೆಯುತ್ತಿರುವ ಜನಸ್ವರಾಜ್ಯ ಸಮಾವೇಶದಲ್ಲಿ ಕಾಂಗ್ರೆಸ್​ ವಿರುದ್ಧ ಸಂಸದ ಪ್ರತಾಪ್​ ಸಿಂಹ (MP Pratap Simha slams Congress) ವಾಗ್ದಾಳಿ ನಡೆಸಿದರು.

mysore-mp-pratap-simha
ಸಂಸದ ಪ್ರತಾಪ್ ಸಿಂಹ

By

Published : Nov 19, 2021, 3:55 PM IST

ರಾಯಚೂರು: ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ‌ ಆಡಳಿತ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿ ಆಡಳಿತ ಸ್ಥಾಪನೆ ಶತಸಿದ್ಧವೆಂದು ಸಂಸದ ಪ್ರತಾಪ್‌ಸಿಂಹ ಕಾಂಗ್ರೆಸ್ ವಿರುದ್ದ ನೇರ ವಾಗ್ದಾಳಿ ನಡೆಸಿದ್ದಾರೆ.


ಜಿಲ್ಲೆಯ ಸಿರವಾರ ಪಟ್ಟಣದಲ್ಲಿಂದು ಆಯೋಜಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಹಿಟ್​ ಆ್ಯಂಡ್ ರನ್ ನಾಯಕ. ಅವರು ಪ್ರಧಾನಮಂತ್ರಿ ವಿರುದ್ದ ನಿರಂತರ ಆರೋಪ ಮಾಡುತ್ತಿದ್ದಾರೆ. ಮೊದಲು ಜಾತಿ ಗಣತಿ ನಂತರ ರಸಗೊಬ್ಬರ, ಪೆಟ್ರೋಲ್​ ದರ‌‌ ಏರಿಕೆ‌ ವಿರೋಧಿಸಿ ಪ್ರತಿಭಟನೆ ಮಾಡಿದ ನಂತರ ಬೆಂಜ್ ಕಾರಿನಲ್ಲಿ ಹೋದ್ರು. ಸದ್ಯ ಅವರ ಎಲ್ಲಾ‌ ಆರೋಪಗಳಿಗೆ ಬಿಜೆಪಿ ಪ್ರತ್ಯುತ್ತರ ನೀಡಿದೆ ಎಂದರು‌.

'ಕಾಂಗ್ರೆಸ್​ಗೆ ಮೊದಲಿನಿಂದ ಶ್ರೀಕಿ ನಂಟು':

ಬಿಟ್‌ಕಾಯಿನ್ (Bitcoin scam) ಆರೋಪಿ ಶ್ರೀಕಿಗೆ ಕಾಂಗ್ರೆಸ್‌ ಜತೆ ಮೊದಲಿನಿಂದಲೂ ನಂಟಿದೆ. ಬಿಟ್ ಕಾಯಿನ್ ಅಕ್ರಮದಲ್ಲಿ ಹಣ ಕಳೆದುಕೊಂಡವರು ದೂರು ದಾಖಲಿಸುವಂತೆ ಮಾಡಿರುವ ಬಿಜೆಪಿ ವಿರುದ್ಧವೇ ಆರೋಪ ಮಾಡುತ್ತಿದೆ. ಬಿಜೆಪಿ ಆರ್​ಎಸ್​ಎಸ್ ಸಿದ್ಧಾಂತವನ್ನು ನಾವು ಒಪ್ಪುತ್ತೇವೆ. ಕಾಂಗ್ರೆಸ್ ಪಕ್ಷ ಬ್ರಿಟಿಷ್ ಸಿದ್ದಾಂತವಿರುವ ಪಕ್ಷ ಎಂದು ಕಾಂಗ್ರೆಸ್ಸಿಗರು ಒಪ್ಪಿಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕೆ ಸಮರ್ಥಿಸಿಕೊಂಡ ಪ್ರತಾಪ್ ಸಿಂಹ, ಪೇಪರ್ ಸಿಂಹ ಎಂದು ಖರ್ಗೆ ತಮ್ಮ ಹೆಸರಿನ ಬಗ್ಗೆ ಟೀಕೆ ಮಾಡಬಹುದಾದರೆ, ತನ್ನ ಪ್ರಿಯಾಂಕ ಹೆಸರಿನ ಬಗ್ಗೆ ಹೇಳಿಕೆ ತಪ್ಪಲ್ಲ ಎಂದರು.

ABOUT THE AUTHOR

...view details