ಲಿಂಗಸುಗೂರು(ರಾಯಚೂರು): ಕೃಷ್ಣಾ ನದಿ ಪ್ರವಾಹದಿಂದ ಮುಳುಗುತ್ತಿರುವ ಮ್ಯಾದರಗಡ್ಡಿ ನಡುಗಡ್ಡೆಯಿಂದ ಜನರನ್ನು ಸ್ಥಳಾಂತರ ಮಾಡುವುದಕ್ಕೆ ಸಂತ್ರಸ್ತ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದರೆ, ಅಧಿಕಾರಿಗಳಿಂದ ಅವರ ಮನವೊಲಿಕೆ ಯತ್ನ ಮುಂದುವರೆದಿದೆ.
ಒಪ್ಪೊತ್ತಿನ ಗಂಜಿಗೆ ನಡುಗಡ್ಡೆ ಬಿಟ್ಟು ಬರಲ್ಲ: ನಡುಗಡ್ಡೆಯಲ್ಲಿನ ಸಂತ್ರಸ್ತರ ಆಕ್ರೋಶ - myadaragaddi people opposed to leave island
ನಾರಾಯಣಪುರ ಅಣೆಕಟ್ಟೆಯಿಂದ 2.50 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದು ಮ್ಯಾದರಗಡ್ಡಿ, ಕರಕಲಗಡ್ಡಿ, ವಂಕಮ್ಮನಗಡ್ಡಿಯಲ್ಲಿ ಸಿಲುಕಿದ ಕೆಲ ಕುಟುಂಬಸ್ಥರ ಸಂರಕ್ಷಣೆಗೆ ತಾಲೂಕು ಆಡಳಿತ ಹರಸಾಹಸ ಪಡುತ್ತಿದೆ. ಆದ್ರೆ ಸಂತ್ರಸ್ತರು ಮಾತ್ರ ಒಪ್ಪೊತ್ತಿನ ಗಂಜಿಗಾಗಿ ಈ ನಡುಗಡ್ಡೆ ಬಿಟ್ಟು ಬರಲ್ಲವೆಂದು ಪಟ್ಟು ಹಿಡಿದಿದ್ದಾರೆ.
![ಒಪ್ಪೊತ್ತಿನ ಗಂಜಿಗೆ ನಡುಗಡ್ಡೆ ಬಿಟ್ಟು ಬರಲ್ಲ: ನಡುಗಡ್ಡೆಯಲ್ಲಿನ ಸಂತ್ರಸ್ತರ ಆಕ್ರೋಶ myadaragaddi](https://etvbharatimages.akamaized.net/etvbharat/prod-images/768-512-8465328-327-8465328-1597751796901.jpg)
ನಾರಾಯಣಪುರ ಅಣೆಕಟ್ಟೆಯಿಂದ 2.50 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದು ಮ್ಯಾದರಗಡ್ಡಿ, ಕರಕಲಗಡ್ಡಿ, ವಂಕಮ್ಮನಗಡ್ಡಿಯಲ್ಲಿ ಸಿಲುಕಿದ ಕೆಲ ಕುಟುಂಬಸ್ಥರ ಸಂರಕ್ಷಣೆಗೆ ತಾಲೂಕು ಆಡಳಿತ ಹರಸಾಹಸ ಪಡುತ್ತಿದೆ. ಲಿಂಗಸುಗೂರು ತಾಲೂಕಿನ ಯರಗೋಡಿ ಬಳಿಯ ನದಿ ತಟದಿಂದ ಬೋಟ್ ಮೂಲಕ ಕರೆತರಲು ಹೋಗಿದ್ದ ಡಿವೈಎಸ್ಪಿ ಎಸ್.ಎಸ್. ಹುಲ್ಲೂರು ನೇತೃತ್ವದ ತಂಡದ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅವರು ವಿಡಿಯೋ ಕಾಲ್ ಮೂಲಕ ಸಂತ್ರಸ್ತರನ್ನು ಮಾತನಾಡಿಸಿದರು.
ನಡುಗಡ್ಡೆಯಲ್ಲಿ ಸಿಲುಕಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ದೇವಮ್ಮ ಮಾತನಾಡಿ, ಪರ್ಯಾಯ ವ್ಯವಸ್ಥೆ ಮಾಡಿದ ನಂತರವೇ ಬರುತ್ತೇವೆ. ಒಪ್ಪೊತ್ತಿನ ಗಂಜಿಗಾಗಿ ನಡುಗಡ್ಡೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.