ರಾಯಚೂರು:ಜಿಲ್ಲೆಯ ಮಸ್ಕಿ ತಾಲೂಕು ಯುವ ಕಾಂಗ್ರೆಸ್ ಘಟಕವನ್ನು ವಿಸರ್ಜನೆ ಮಾಡಿರುವುದಾಗಿ ಜಿಲ್ಲಾಧ್ಯಕ್ಷ ಅರುಣ ಧೋತ್ತರಬಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಸ್ಕಿ ಕಾಂಗ್ರೆಸ್ ಯುವ ಸಮಿತಿ ವಿಸರ್ಜನೆ - ಅರುಣ ಧೋತ್ತರಬಂಡಿ
ಮಸ್ಕಿ ತಾಲೂಕು ಯುವ ಕಾಂಗ್ರೆಸ್ ಘಟಕದಲ್ಲಿ ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್ ಬೆಂಬಲಿಗರು ಇರುವ ಕಾರಣ ತಾಲೂಕು ಸಮಿತಿಯನ್ನ ವಿಸರ್ಜನೆ ಮಾಡಲಾಗಿದೆ.
ಅರಣು ಧೋತ್ತರಬಂಡಿ
ಮಸ್ಕಿ ತಾಲೂಕು ಯುವ ಕಾಂಗ್ರೆಸ್ ಘಟಕದಲ್ಲಿ ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್ ಬೆಂಬಲಿಗರು ಇರುವ ಕಾರಣ ತಾಲೂಕು ಸಮಿತಿಯನ್ನ ವಿಸರ್ಜನೆ ಮಾಡಲಾಗಿದ್ದು, ಮುಂಬರುವ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಪಕ್ಷ ಸಂಘಟನೆ ಮಾಡುವಂತಹ ತಾಲೂಕು ಯುವ ಘಟಕವನ್ನು ಸ್ಥಾಪಿಸುವುದಾಗಿ ಜಿಲ್ಲಾ ಯುವ ಘಟಕ ಸಮಿತಿ ತಿಳಿಸಿದೆ.
ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಎರಡನೇ ಬಾರಿಗೆ ಶಾಸಕರಾಗಿದ್ದ ಪ್ರತಾಪ್‌ಗೌಡ ಪಾಟೀಲ್ ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹಗೊಂಡಿದ್ದಾರೆ.