ಕರ್ನಾಟಕ

karnataka

ETV Bharat / state

ಲಿಂಗಸುಗೂರು : ಪಿಡಿಒ ಮೇಲೆ ಹಲ್ಲೆ, ಜೀವ ಬೆದರಿಕೆ ಆರೋಪ - murder threat call to hunuru pdo

ಗುರುವಾರ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ತೆರಳಿದ್ದ ತನ್ನ ಮೇಲೆ ಪೂರ್ವ ನಿಯೋಜಿತ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ಪಿಡಿಒ ದೂರು ನೀಡಿದ್ದಾರೆ..

murder threat call to hunuru pdo
ಪಿಡಿಒ ಮೇಲೆ ಹಲ್ಲೆ

By

Published : Feb 19, 2021, 10:46 AM IST

ಲಿಂಗಸುಗೂರು/ರಾಯಚೂರು: ಲಿಂಗಸುಗೂರು ತಾಲೂಕು ಹೂನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಹೂನೂರು ಪಿಡಿಒ ಅಧಿಕಾರಿ ಈಶ್ವರಪ್ಪ ಗೆಜ್ಜಲಗಟ್ಟಾ ಅವರ ಮೇಲೆ ಮಾಕಾಪುರ ಗ್ರಾಮದ ಸಿದ್ದನಗೌಡ ಸಾಹುಕಾರ ಮತ್ತು ಇನ್ನೋರ್ವ ಸೇರಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಗುರುವಾರ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ತೆರಳಿದ್ದ ತನ್ನ ಮೇಲೆ ಪೂರ್ವ ನಿಯೋಜಿತ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ಪಿಡಿಒ ದೂರು ನೀಡಿದ್ದಾರೆ. ಲಿಂಗಸುಗೂರು ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details