ರಾಯಚೂರು: ಕಾಂಪೌಂಡ್ ವಿಚಾರಕ್ಕೆ ವ್ಯಕ್ತಿಯೊಬ್ಬನನ್ನು ಕುಡುಗೋಲಿನಿಂದ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪುಚ್ಚಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಕಾಂಪೌಂಡ್ ವಿಚಾರಕ್ಕೆ ವ್ಯಕ್ತಿಯ ಕತ್ತು ಕೊಯ್ದು ಬರ್ಬರ ಹತ್ಯೆ! - ರಾಯಚೂರಿನಲ್ಲಿ ವ್ಯಕ್ತಿಯ ಕತ್ತು ಕೊಯ್ದು ಬರ್ಬರ ಹತ್ಯೆ
ಗ್ರಾಮದ ದೇವಾಲಯದ ಬಳಿ ಕುಳಿತುಕೊಂಡಿದ್ದ ವೇಳೆ ಚನ್ನಯ್ಯ ಸ್ವಾಮಿ ಎಂಬಾತ ಕುಡುಗೋಲಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಆರೋಪಿಯನ್ನು ತಕ್ಷಣ ಸ್ಥಳೀಯರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.
![ಕಾಂಪೌಂಡ್ ವಿಚಾರಕ್ಕೆ ವ್ಯಕ್ತಿಯ ಕತ್ತು ಕೊಯ್ದು ಬರ್ಬರ ಹತ್ಯೆ!](https://etvbharatimages.akamaized.net/etvbharat/prod-images/768-512-8533995-thumbnail-3x2-hrs.jpg)
ನಂದಯ್ಯ ಸ್ವಾಮಿ (40) ಹತ್ಯೆಯಾದ ವ್ಯಕ್ತಿ. ಗ್ರಾಮದ ದೇವಾಲಯದ ಬಳಿ ಕುಳಿತುಕೊಂಡಿದ್ದ ವೇಳೆ ಚನ್ನಯ್ಯ ಸ್ವಾಮಿ ಎಂಬಾತ ಕುಡುಗೋಲಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಆರೋಪಿಯನ್ನು ತಕ್ಷಣ ಸ್ಥಳೀಯರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.
ಸ್ಥಳಕ್ಕೆ ಇಡಪನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಂಪೌಂಡ್ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗ್ತಿದೆ. ನಿಖರವಾದ ಕಾರಣ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Last Updated : Aug 24, 2020, 12:33 PM IST