ಕರ್ನಾಟಕ

karnataka

ETV Bharat / state

ವಿಚ್ಛೇದಿತ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ: ಲಿಂಗಸುಗೂರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ - ಗುಂತಗೋಳ ಗ್ರಾಮ

ಲಿಂಗಸುಗೂರು ತಾಲೂಕಿನ ಗುಂತಗೋಳ ಗ್ರಾಮದಲ್ಲಿ ತನ್ನ ವಿಚ್ಛೇದಿತ ಪತ್ನಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದವನನ್ನು ವ್ಯಕ್ತಿಯೊಬ್ಬ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

raichur
ವಿಚ್ಛೇದಿತ ಪತ್ನಿಯೊಂದಿಗೆ ಅಕ್ರಮ ಸಂಬಂಧ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ

By

Published : Jul 22, 2021, 1:28 PM IST

ರಾಯಚೂರು: ಬರ್ಬರ ಕೊಲೆ ಪ್ರಕರಣದಿಂದ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ. ತನ್ನ ವಿಚ್ಛೇದಿತ ಪತ್ನಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆಕೆಯ ಮೊದಲ ಪತಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಲಿಂಗಸುಗೂರು ತಾಲೂಕಿನ ಗುಂತಗೋಳ ಗ್ರಾಮದಲ್ಲಿ ನಡೆದಿದೆ.

ವಿಚ್ಛೇದಿತ ಪತ್ನಿಯೊಂದಿಗೆ ಅಕ್ರಮ ಸಂಬಂಧ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ

ಮೌನೇಶ್​ ನಾಯಕ (29) ಕೊಲೆಯಾದ ವ್ಯಕ್ತಿ. ಮೌನೇಶ್ ವಿಚ್ಛೇದಿತ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕೆ ಆಕೆ ಮೊದಲ ಪತಿ ಗುಂಡಪ್ಪ ನಾಯಕ ಹಾಗೂ ಆತನ ಸಹಚರರು ಗುಂತಗೋಳ ಗ್ರಾಮದ ದೇವಸ್ಥಾನದ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಮೌನೇಶ್​ನನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಹಿಳೆ ಪ್ರತಿಕ್ರಿಯೆ

ಗುಂಡಪ್ಪನಿಂದ ವಿಚ್ಛೇದನ ಪಡೆದ ಬಳಿಕ ಮೌನೇಶ್​ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದೆ. ಅದೇ ದ್ವೇಷಕ್ಕೆ ಗುಂಡಪ್ಪ ಹಾಗೂ ಆತನ ಸಂಬಂಧಿಕರು ಮೌನೇಶ್​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾಳೆ.

ಸ್ಥಳಕ್ಕೆ ಡಿವೈಎಸ್​ಪಿ ಎಸ್.ಎಸ್. ಹಳ್ಳೂರು, ಸಿಪಿಐ ಮಹಾಂತೇಶ್​ ಸಜ್ಜನ್​, ಪಿಎಸ್ಐ ಪ್ರಕಾಶ್​ ರೆಡ್ಡಿ ಡಂಬಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಕೊಲೆ ಆರೋಪಿ ಗುಂಡಪ್ಪನನ್ನು ಬಂಧಿಸಿದ್ದು, ಸಹಚರರ ಬಂಧನಕ್ಕೆ ಜಾಲ ಬೀಸಿದ್ದಾರೆ.

ಇದನ್ನೂ ಓದಿ:ಮೂರು ಮಕ್ಕಳೊಂದಿಗೆ ತಾಯಿಯ ಗಂಟಲು ಕತ್ತರಿಸಿ ಕೊಲೆ!

ABOUT THE AUTHOR

...view details