ಕರ್ನಾಟಕ

karnataka

ETV Bharat / state

ರಾಯಚೂರು: ಸಂಬಳ ನೀಡಿ ಎಂದು ಗೋಗರೆಯುತ್ತಿರುವ ಪೌರಕಾರ್ಮಿಕರು - ಪೌರಕಾರ್ಮಿಕರು

ರಾಯಚುರು ನಗರಸಭೆಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ಹಾಗು ಡ್ರೈವರ್​​ಗಳಿಗೆ ಸಂಬಳ ನೀಡದೇ ಸತಾಯಿಸುತ್ತಿದ್ದು, ಕಾರ್ಮಿಕರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ ಎಂದು ದಿನಗೂಲಿ ನೌಕರರು ಕಿಡಿಕಾರಿದ್ದಾರೆ.

ನಗರಸಭೆ ಕಾರ್ಮಿಕರ ದುಸ್ಥಿತಿ ಇದು

By

Published : Sep 11, 2019, 10:37 PM IST

Updated : Sep 12, 2019, 10:33 AM IST

ರಾಯಚೂರು:ಸಾಕಷ್ಟು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ನಗರಸಭೆ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ಅದು ದಿನಗೂಲಿ ನೌಕರರಿಗೆ ವೇತನ ಪಾವತಿ ಮಾಡದೇ ಕಾರ್ಮಿಕರ ತಾಳ್ಮೆ ಪರೀಕ್ಷಿಸಲು ಮುಂದಾಗಿ ತೀವ್ರ ಆಕ್ರೋಶಕ್ಕೆ ನಗರಸಭೆ ಗುರಿಯಾಗಿದೆ.

ಶ್ರಮ ವಹಿಸುವ ಪೌರಕಾರ್ಮಿಕರಿಗೆ ಕಳೆದ 4 ತಿಂಗಳಿಂದ ಹಾಗೂ ಸ್ವಚ್ಛತೆ ಕಾರ್ಯದಲ್ಲಿ ಸಹಾಯವಾಗುವ ಡ್ರೈವರ್​​ಗಳಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿ ಮಾಡದ ನಗರಸಭೆ, ಇವರ ಶ್ರಮಕ್ಕೆ ತಕ್ಕ ಬೆಲೆ ನೀಡದೇ ಅಮಾನವೀಯವಾಗಿ ವರ್ತಿಸುತ್ತಿದೆ.

ನಗರಸಭೆ ಕಾರ್ಮಿಕರ ದುಸ್ಥಿತಿ ಇದು
284 ಪೌರ ಕಾರ್ಮಿಕರ ಪ್ರತಿ ತಿಂಗಳು 12 ಸಾವಿರದಂತೆ ಹಾಗೂ 22 ಡ್ರೈವರ್​​ಗಳ ತಲಾ 8 ಸಾವಿರದಂತೆ 8 ತಿಂಗಳ ವೇತನ ಗುತ್ತಿಗೆದಾರರು ಪಾವತಿಸಿದೇ ನಿರ್ಲಕ್ಷ್ಯ ತೋರಿದ್ದು, ಇದರಿಂದ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ ಎಂದು ಅಳಲು ತೋಡಿಕೊಳ್ತಾರೆ ಕಾರ್ಮಿಕರು.

ವೇತನ ಪಾವತಿಗಾಗಿ ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹಲವಾರು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ, ಅಲ್ಲದೇ ನಗರಸಭೆ ಪೌರಾಯುಕ್ತರು ಪೌರ ಕಾರ್ಮಿಕರ ಸಮಸ್ಯೆ ನಿವಾರಿಸುವಲ್ಲಿ ವಿಫಲರಾಗಿದ್ದು ಇದ್ದು ಇಲ್ಲದಂತಾಗಿದೆ ಎಂದು ಕಾರ್ಮಿಕರು ಕಿಡಿಕಾರಿದ್ದಾರೆ.

Last Updated : Sep 12, 2019, 10:33 AM IST

ABOUT THE AUTHOR

...view details