ರಾಯಚೂರು: ಜಿಲ್ಲೆಯ ಲಿಂಗಸುಗೂರು ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಇತ್ತೀಚೆಗೆ ಈಟಿವಿ ಭಾರತ್ನಿಂದ ಮಾಡಲಾಗಿದ್ದ ವರದಿಗೆ ಸ್ಪಂದಿಸಿ ಚರಂಡಿಯಲ್ಲಿದ್ದ ಪೈಪ್ಲೈನ್ ತೆರವುಗೊಳಿಸಿದ್ದಕ್ಕೆ ವಾರ್ಡ್ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪುರಸಭೆಯ ರಾಜಕಾಲುವೆಯಲ್ಲಿ ಕುಡಿಯುವ ನೀರಿನ ಪೂರೈಕೆ ಪೈಪ್ಗಳ ಮೇಲೆ ಚರಂಡಿ ನಿರ್ಮಿಸಿ ಸ್ಲ್ಯಾಬ್ ಹಾಕುವ ಕಾಮಗಾರಿ ಕಳಪೆಯಿಂದ ಕೂಡಿತ್ತು. ಈ ಕುರಿತು 'ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಕೊಳಚೆ ನೀರಲ್ಲಿ ಕುಡಿವ ನೀರಿನ ಪೈಪ್ಲೈನ್' ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ಬಿತ್ತರಿಸಿದ್ದ ವರದಿಗೆ ಸ್ಪಂದಿಸಿದ ಆಡಳಿತಾಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪೈಪ್ಲೈನ್ ತೆರವುಗೊಳಿಸಿ, ಗುಣಮಟ್ಟದಿಂದ ನಿರ್ಮಿಸಲು ಸೂಚಿಸಿದ್ದಾರೆ.