ರಾಯಚೂರು :ರಾಜ್ಯದಲ್ಲಿ ಭಾವೈಕ್ಯತೆ ಪ್ರತೀಕವಾಗಿರುವ ಮೊಹರಂ ಹಬ್ಬವನ್ನ ಭಕ್ತಿ-ಭಾವದಿಂದ ಆಚರಣೆ ಮಾಡಲಾಗುತ್ತಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುರುಗುಂಟಾ ಗ್ರಾಮದಲ್ಲಿ ಒಂಟಿ ಎತ್ತು ಏಕಕಾಲಕ್ಕೆ 29 ಬಂಡಿಗಳನ್ನು ಎಳೆದು ಪೀರಲ ದೇವರನ್ನು ಹೊತ್ತು ತಂದು ಪ್ರತಿಷ್ಠಾಪಿಸುವ ವಿಶೇಷ ಆಚರಣೆ ನೋಡುಗರನ್ನು ಆಚ್ಚರಿಗೊಳಿಸುತ್ತಿದೆ.
ಮೊಹರಂ ಹಬ್ಬದಲ್ಲಿ ಪವಾಡ ಸೃಷ್ಟಿಸುವ ಬಸವ.. 29 ಬಂಡಿಗಳನ್ನು ಎಳೆದುಕೊಂಡು ಸಾಗುವ ಎತ್ತು.. - Gurugunta moharam
ಗ್ರಾಮದಲ್ಲಿ 10 ದಿನಗಳ ಕಾಲ ನಡೆಯುವ ಮೊಹರಂ ಹಬ್ಬದ ಆಚರಣೆಯಲ್ಲಿ 7ನೇ ದಿನದಂದು ಒಂಟಿ ಎತ್ತು 29 ಬಂಡಿಗಳನ್ನ ಎಳೆದುಕೊಂಡು ಹೋಗುವ ಮೂಲಕ ಪೀರಲ ದೇವರನ್ನು ಸ್ಥಾಪಿಸುವ ವಿಶೇಷ ಆಚರಣೆ ನೋಡುಗರನ್ನು ಬೆರಗುಗೊಳಿಸುತ್ತದೆ.
ಮೊಹರಂ ಹಬ್ಬ
ಗ್ರಾಮದಲ್ಲಿ 10 ದಿನಗಳ ಕಾಲ ನಡೆಯುವ ಮೊಹರಂ ಹಬ್ಬದ ಆಚರಣೆಯಲ್ಲಿ 7ನೇ ದಿನದಂದು ಒಂಟಿ ಎತ್ತು 29 ಬಂಡಿಗಳನ್ನ ಎಳೆದುಕೊಂಡು ಹೋಗುವ ಮೂಲಕ ಪೀರಲ ದೇವರನ್ನು ಸ್ಥಾಪಿಸುವ ವಿಶೇಷ ಆಚರಣೆ ನಡೆಸಲಾಗುತ್ತದೆ. ಗ್ರಾಮದ ಮುಖ್ಯ ಬೀದಿಯಿಂದ ಪ್ರಾರಂಭವಾಗಿ ಬಂಡಿಗಳಲ್ಲಿ ಜನರನ್ನು ಕೂಡಿಸಿಕೊಂಡು ಸರಾಗವಾಗಿ ಹೋಗುವ ಎತ್ತು ಪವಾಡವನ್ನೇ ಸೃಷ್ಟಿಸುತ್ತಿದೆ. ಅಲ್ಲದೆ ಒಂದೊಂದು ಬಂಡಿಯಲ್ಲಿ ಬೃಹದಾಕಾರದ ಮರದ ದಿಣ್ಣೆಗಳಿರುತ್ತವೆ. ಈ ದೃಶ್ಯವನ್ನು ನೋಡಲು ಜಿಲ್ಲೆಯ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿರುತ್ತಾರೆ.