ಕರ್ನಾಟಕ

karnataka

ETV Bharat / state

ಮುದಗಲ್ ಮೊಹರಂ ಆಚರಣೆ ರದ್ದು: ಪಟ್ಟಣದಲ್ಲಿ ನೀರಸ ವಾತಾವರಣ

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹುಸೇನಿ ಆಲಂ ಅಷುರ್ ಖಾನ್ ದರ್ಗಾದಲ್ಲಿ ಹತ್ತು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದ ಮೊಹರಂ ಹಬ್ಬವನ್ನು ಈ ಸಲ ಕೋವಿಡ್​ ಭೀತಿಯ ಹಿನ್ನೆಲೆಯಲ್ಲಿ ರದ್ದು ಪಡಿಸಿರುವುದಾಗಿ ಹುಸೇನಿ ಆಲಂ ಅಷುರ್ ಖಾನ್ ದರ್ಗಾ ಕಮಿಟಿ ತಿಳಿಸಿದೆ.

Mudgal Moharram celebration cancel
ಮುದಗಲ್ ಮೊಹರಂ ಆಚರಣೆ

By

Published : Aug 27, 2020, 9:23 PM IST

ರಾಯಚೂರು: ಜಿಲ್ಲೆಯ ಭಾವೈಕ್ಯತೆಯ ಸಂಕೇತವಾಗಿರುವ ಲಿಂಗಸೂಗೂರು ತಾಲೂಕಿನ ಮುದಗಲ್ ಕೋಟೆಯಲ್ಲಿ ಈ ಬಾರಿ ಮೊಹರಂ ಆಚರಣೆಯನ್ನು ಕೋವಿಡ್​ ಭೀತಿಯ ಹಿನ್ನೆಲೆ ರದ್ದುಪಡಿಸಿರುವುದರಿಂದ ಪಟ್ಟಣದಲ್ಲಿ ನೀರಸ ವಾತಾವರಣ ಸೃಷ್ಟಿಯಾಗಿದೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹುಸೇನಿ ಆಲಂ ಅಷುರ್ ಖಾನ್ ದರ್ಗಾ ಜಾತಿ, ಮತ, ಭೇದ ಮರೆತು ಭಾವ್ಯಕ್ಯತೆಯ ಸಂಕೇತವಾಗಿದೆ. ಮುದಗಲ್ ಮೊಹರಂ ಆಚರಣೆಗೆ ಸುತ್ತಮುತ್ತಲಿನ ಹಳ್ಳಿಗಳು ಸೇರಿದಂತೆ ರಾಜ್ಯ, ಅಂತರ್ ರಾಜ್ಯದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಹತ್ತು ದಿನಗಳ ಕಾಲ ಹಬ್ಬ ಆಚರಿಸಲಾಗುತ್ತಿತ್ತು.

ಆದರೆ ಈ ಬಾರಿ ಕೊರೊನಾ ಭೀತಿಯ ಕಾರಣ ಹುಸೇನಿ ಆಲಂ ಅಷುರ್ ಖಾನ್ ದರ್ಗಾ ಕಮಿಟಿ ಮೊಹರಂ ಆಚರಣೆಯನ್ನು ಸಂಪೂರ್ಣವಾಗಿ ರದ್ದುಪಡಿಸಿರುವುದರಿಂದ ಹತ್ತು ದಿನಗಳ ವಿಶಿಷ್ಠ ಆಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ಕಳೆದ ಎರಡು ದಿನಗಳಿಂದ ಭಕ್ತಾದಿಗಳು ದರ್ಗಾಕ್ಕೆ ಆಗಮಿಸಿ ಆಲಂಗಳ ದರ್ಶನ ಕಾಣದೆ ಹಿಂದಿರುಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ABOUT THE AUTHOR

...view details