ರಾಯಚೂರು:ಮಗುವನ್ನ ನೀರಿನಲ್ಲಿ ಮುಳುಗಿಸಿ ತಾಯಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮಾನವಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ 7ನೇ ವಾರ್ಡ್‌ನ ಕೋನಾಪುರ ಪೇಟೆಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ರಾಘವೇಂದ್ರ(5), ಜಾನಕಿ(27) ಮೃತರು.

ಮನೆಯಲ್ಲಿನ ಬ್ಯಾರಲ್‌ನಲ್ಲಿ ಸಂಗ್ರಹಿಸಿದ ನೀರಿನಲ್ಲಿ ಮೊದಲಿಗೆ ಮಗುವನ್ನ ಮುಳುಗಿಸಿ, ಬಳಿಕ ತಾನು ನೇಣು ಬಿಗಿದುಕೊಂಡು ಮಹಿಳೆ ಸಾವ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳದಲ್ಲಿ ಇಲ್ಲಿಯವರೆಗೆ ಪತಿ ಕಾಣಿಸಿಕೊಂಡಿಲ್ಲ. ಇದರಿಂದಾಗಿ ತಾಯಿ, ಮಗುವಿನ ಸಾವಿನ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಮೇಲ್ನೋಟಕ್ಕೆ ಕೌಟುಂಬಿಕ ಕಲಹ ಘಟನೆಗೆ ಕಾರಣ ಇರಬಹುದೆಂದು ಹೇಳಲಾಗುತ್ತಿದ್ದು, ಪೊಲೀಸರ ತನಿಖೆ ಬಳಿಕ ಘಟನೆಯ ಕಾರಣ ತಿಳಿದು ಬರಲಿದೆ. ಈ ಬಗ್ಗೆ ಮಾನವಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.