ರಾಯಚೂರು:ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ ನಗರದ ಕೊಳಗೇರಿ ನಿವಾಸಿಗಳಿಗೆ ಸಂಕಟ ಎದುರಾಗಿದೆ. ನಗರದ ಕೊಳಗೇರಿ ಪ್ರದೇಶಗಳಲ್ಲಿ ನಿಂತ ನೀರು, ಕಸದ ರಾಶಿ, ಕೊಳಚೆ ನೀರಿನಿಂದ ಗಬ್ಬು ನಾರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಗಲೀಜಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರು ನಾನಾ ರೋಗಗಳಿಗೆ ತುತ್ತಾಗುವಂತಾಗಿದೆ.
ಅಸ್ವಚ್ಛತೆ, ಕಸದ ತಿಪ್ಪೆ, ಮಲಿನ ನೀರು ನಿಲ್ಲುವ ಕಾರಣ ಸೊಳ್ಳೆಗಳ ಪ್ರಮಾಣ ಅಧಿಕವಾಗಿದೆ. ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಸೇರಿದಂತೆ ಅನೇಕ ಮಾರಕ ರೋಗಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಈ ದಿಸೆಯಲ್ಲಿ ರಾಯಚೂರು ನಗರದ ಮಡ್ಡಿಪೇಟೆ, ಹರಿಜನವಾಡ, ಸಿಯಾತಲಾಬ್ ಪ್ರದೇಶಗಳಿಗೆ 'ಈಟಿವಿ ಭಾರತ' ಭೇಟಿ ನೀಡಿ ಪರಿಶೀಲಿಸಿದಾಗ ಈ ಸತ್ಯಾಂಶ ಬಯಲಾಗಿದೆ.