ಕರ್ನಾಟಕ

karnataka

ರಾಯಚೂರು: 8 ಲಕ್ಷ ರೂ.ಗೂ ಅಧಿಕ ದಂಡ ವಸೂಲಿ

By

Published : May 12, 2021, 10:54 AM IST

ರಾಯಚೂರಿನಲ್ಲಿ ಜ.1ರಿಂದ ಏ.21ರವರೆಗೆ ಮಾಸ್ಕ್​ ಹಾಕದವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಒಟ್ಟು 7541 ಮಂದಿ ಮಾಸ್ಕ್​ ಹಾಕದೆ ಸಿಕ್ಕಿಬಿದ್ದಿದ್ದು, 8 ಲಕ್ಷ 64 ಸಾವಿರದ 950 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

Raichur
ರಾಯಚೂರು

ರಾಯಚೂರು: ಕೊರೊನಾ ಸೋಂಕಿನ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿದೆ. ಈ ವೇಳೆ ನಿಯಮಗಳು ಉಲ್ಲಂಘಿಸಿವರಿಗೆ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ಜಿಲ್ಲೆಯಲ್ಲಿ ಜ.1ರಿಂದ ಏ.21ರವರೆಗೆ ಮಾಸ್ಕ್​ ಹಾಕದವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಒಟ್ಟು 7541 ಮಂದಿ ಮಾಸ್ಕ್​ ಹಾಕದೆ ಸಿಕ್ಕಿಬಿದ್ದಿದ್ದು, 8 ಲಕ್ಷ 64 ಸಾವಿರದ 950 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಏ. 22ರಿಂದ ಮೇ.9ವರೆಗೆ ಜನತಾ ಕರ್ಫ್ಯೂ ಅವಧಿಯಲ್ಲಿ ಮಾಸ್ಕ್ ಧರಿಸದ 8004 ಪ್ರಕರಣ ದಾಖಲಿಸಿದ್ದು, 8 ಲಕ್ಷ 24 ಸಾವಿರದ 250 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಅನವಶ್ಯಕವಾಗಿ ವಾಹನ‌ದ ಮೂಲಕ ಓಡಾಡಿದ 3200 ದ್ವಿಚಕ್ರ ವಾಹನ, 351 ನಾಲ್ಕು ಚಕ್ರದ ವಾಹನ, 125 ಇತರೆ ವಾಹನಗಳು ಸೇರಿ ಒಟ್ಟು 3679 ವಾಹನಗಳನ್ನ ಜಪ್ತಿ ಮಾಡಲಾಗಿದೆ.

ದಿ ಕರ್ನಾಟಕ ಎಪಿಡಮಿಕ್​ ಡಿಸೀಸ್​ ಆ್ಯಕ್ಟ್​ 2020ರ ಅಡಿಯಲ್ಲಿ 108 ಪ್ರಕರಣಗಳು ದಾಖಲಿಸಿದ್ದು, ನ್ಯಾಷನಲ್​ ಡಿಸಾಸ್ಟರ್​ ಮ್ಯಾನೇಜ್​ಮೆಂಟ್​ ಆ್ಯಕ್ಟ್​ 2005 ರ ಅಡಿಯಲ್ಲಿ ಮೂರು ಪ್ರಕರಣಗಳು ದಾಖಲಿಸಿ ಇನ್ನಿತ್ತರ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಮೊಕದ್ದಮೆ ದಾಖಲಿಸುವ ಮೂಲಕ‌ ದಂಡ‌ ವಿಧಿಸಲಾಗಿದೆ. ಮೇ 10ರಂದು ಮಾಸ್ಕ್ ಧರಿಸಿದೆ ಇರುವವರು 699, ಸಾಮಾಜಿಕ ಅಂತರ ಉಲ್ಲಂಘನೆಯ 4 ಪ್ರಕರಣಗಳನ್ನು ದಾಖಲಿಸಿ 70,300 ರೂಪಾಯಿ ದಂಡ ವಿಧಿಸಲಾಗಿದೆ.

ಜಪ್ತಿ ಮಾಡಿರುವ ವಾಹನಗಳನ್ನ ನ್ಯಾಯಲಯದ ಮೂಲಕ‌ ವಾಹನಗಳನ್ನ ಬಿಡುಗಡೆಗೊಳಿಸಬೇಕಾಗಿದೆ. ಸದ್ಯ ಲಾಕ್‌ಡೌನ್ ನಿಯಮಗಳು ಜಾರಿಯಲ್ಲಿದ್ದು, ಅನವಶ್ಯಕವಾಗಿ ಓಡಾಡುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗುವುದು. ಅಲ್ಲದೇ ಸಾರ್ವಜನಿಕರು ಮನೆಯಿಂದ ಅನವಶ್ಯಕ ಹೊರಗಡೆ ಬಾರದಂತೆ ಪೊಲೀಸ್​ ಇಲಾಖೆ ಮನವಿ ಮಾಡಿದೆ.

ABOUT THE AUTHOR

...view details