ರಾಯಚೂರು: ಕುಡಿಯುವ ನೀರಿನ ಟ್ಯಾಂಕ್ನಲ್ಲಿ 5 ಕೋತಿಗಳು ಬಿದ್ದು ಸಾವನ್ನಪ್ಪಿರುವ ಘಟನೆ ಜೆ. ಮಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ವಾಟರ್ ಟ್ಯಾಂಕ್ನಲ್ಲಿ ಬಿದ್ದು ಕೋತಿಗಳು ಸಾವು... ಅದೇ ನೀರು ಕುಡಿದ ಗ್ರಾಮಸ್ಥರು ಅಸ್ವಸ್ಥ - undefined
ಟ್ಯಾಂಕ್ನಲ್ಲಿದ್ದ ನೀರು ಕುಡಿಯಲು ಹೋಗಿ 5 ಕೋತಿಗಳು ಸಾವನ್ನಪ್ಪಿವೆ. ಇದೇ ನೀರನ್ನು ಕುಡಿದಿರುವ ಗ್ರಾಮಸ್ಥರು ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದಾರೆ. ಬಳಿಕ ನೀರಿನ ಟ್ಯಾಕ್ ಪರಿಶೀಲಿಸಿ, ಕೋತಿಗಳ ಮೃತದೇಹವನ್ನು ಹೊರತೆಗೆಯಲಾಗಿದೆ.
ನೀರಿನ ಟ್ಯಾಂಕ್ನಲ್ಲಿ ಬಿದ್ದು ಕೋತಿಗಳು ಸಾವು..
ಗ್ರಾಮಕ್ಕೆ ನೀರು ಪೂರೈಕೆಯಾಗುವ ಟ್ಯಾಂಕ್ ಬಳಿ ನೀರು ಕುಡಿಯಲು ಹೋದಾಗ ಟ್ಯಾಂಕ್ನಲ್ಲಿ ಬಿದ್ದು ಕೋತಿಗಳು ಅಸುನೀಗಿವೆ. ಗ್ರಾಮಸ್ಥರಿಗೆಲ್ಲ ಕುಡಿಯುವುದಕ್ಕೆ ಇದೇ ನೀರು ಪೂರೈಕೆಯಾಗುವುದರಿಂದ ಕೆಲವರಿಗೆ ವಾಂತಿ-ಭೇದಿ ಶುರುವಾಗಿದೆ. ಇದರಿಂದ ಗಾಬರಿಗೊಂಡ ಜನರು ನೀರಿನ ಟ್ಯಾಂಕ್ ಪರಿಶೀಲಿಸಿದಾಗ ಕೋತಿಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಕೋತಿಗಳನ್ನ ಹೊರ ತೆಗೆದು ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.