ಕರ್ನಾಟಕ

karnataka

ETV Bharat / state

ರಾಯರ ಹೆಸರಲ್ಲಿ ‌ವಂಚನೆ: ಭಕ್ತರಿಗೆ ಮಠದ ವ್ಯವಸ್ಥಾಪಕರಿಂದ ಎಚ್ಚರಿಕೆ - Fraud in the name of mantralaya math

ಮಂತ್ರಾಲಯದ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪರಿಮಳ ಪ್ರಸಾದದ ಹೆಸರಲ್ಲಿ ವಂಚನೆ ನಡೆದಿದೆ.

Fraud in the name of mantralaya prasad
ಭಕ್ತರು ಎಚ್ಚರಿಕೆ ವಹಿಸಿ ಎಂದ ಶ್ರೀಮಠದ ಮ್ಯಾನೇಜರ್

By

Published : Jun 26, 2022, 2:30 PM IST

ರಾಯಚೂರು: ಮಂತ್ರಾಲಯ ‌ಮಠದ ಹೆಸರಿನಲ್ಲಿ ‌ಹಣ ವಂಚನೆ ಮಾಡುತ್ತಿರುವ ಪ್ರಕರಣ ಕೇಳಿ ಬಂದಿದೆ. ಶ್ರೀಮಠದಲ್ಲಿ 25 ರೂಪಾಯಿಗೆ ಸಿಗುವ ಪರಿಮಳ ಪ್ರಸಾದವನ್ನು 400 ರೂ.ಗೆ ಮಾರಾಟ ಮಾಡಲಾಗಿದೆ. ನಕಲಿ ವೆಬ್‌ಸೈಟ್ ‌ಮಾಡಿ ಮಾರಾಟ ಮಾಡಿರುವ ಪ್ರಕರಣ ಗಮನಕ್ಕೆ ಬಂದಿದೆ. ಈ ಕುರಿತು ಮಂತ್ರಾಲಯ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಠದ ಮ್ಯಾನೇಜರ್ ‌ಎಸ್​​.ಕೆ. ಶ್ರೀನಿವಾಸ್ ರಾವ್ ಹೇಳಿದ್ದಾರೆ.


ಮಂತ್ರಾಲಯ ಮಠದ ಅರ್ಚಕರ ಹೆಸರಿನಲ್ಲಿಯೂ ಹಣ ವಸೂಲಿ ‌ಮಾಡಲಾಗಿದೆ. ಮಂತ್ರಾಲಯ ಬ್ಯಾಂಕ್​ನಲ್ಲಿ ಖಾತೆ ತೆಗೆದು ಹಣ ವಸೂಲಿ ಮಾಡಿದ್ದಾರೆ. ಮಾತೃಭೂಮಿ ಹಿಂದೂ ಸ್ಪಂದನೆ ಹೆಸರಿನಲ್ಲಿ ಕೃತ್ಯ ಎಸಗಲಾಗಿದೆ. ಮಂತ್ರಾಲಯ ಅಭಿವೃದ್ಧಿ ಕಾರ್ಯಕ್ರಮಗಳ ಹೆಸರಿನಲ್ಲಿಯೂ ಹಣ ವಸೂಲಿ ಮಾಡಲಾಗಿದ್ದು, ಈ ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು‌ ನೀಡಲಾಗಿದೆ ಎಂದು ಹೇಳಿದರು.

ಭಕ್ತರು ದೇಣಿಗೆ ನೀಡಬೇಕಾದರೆ ಮಠದ ಅಧಿಕೃತ ವೆಬ್‌ಸೈಟ್​ನಲ್ಲಿ ಮಾತ್ರ ನೀಡಬೇಕು. ಅಕ್ರಮದ ಬಗ್ಗೆ ಮಾಹಿತಿ ಇದ್ರೆ ತಕ್ಷಣವೇ ಶ್ರೀಮಠಕ್ಕೆ ತಿಳಿಸಬೇಕು ಹಾಗೂ ಎಲ್ಲಾ ಭಕ್ತರು ಎಚ್ಚರದಿಂದ ಇರಬೇಕೆಂದು ಎಸ್.ಕೆ. ಶ್ರೀನಿವಾಸ್ ರಾವ್ ತಿಳಿಸಿದರು.

ಇದನ್ನೂ ಓದಿ:ಯಕ್ಷ ನೃತ್ಯದ ಮೂಲಕ ವಿಶ್ವಶಾಂತಿ ಸಂದೇಶ ಸಾರುವ ಶಿರಸಿಯ ಬಾಲಕಿ

ABOUT THE AUTHOR

...view details