ಕರ್ನಾಟಕ

karnataka

ETV Bharat / state

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಹಣ ಹಂಚಿಕೆ ವಿಡಿಯೋ ವೈರಲ್​ - Money distribution video viral in maski

ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿರುವ ಶಿವಮೊಗ್ಗ, ಬೆಂಗಳೂರು ಮೂಲದ ಬಿಜೆಪಿ ಕಾರ್ಯಕರ್ತರು ಮಹಿಳೆಯರನ್ನು ಒಂದೆಡೆ ಸೇರಿಸಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪಗೌಡ ಪಾಟೀಲರಿಗೆ ಮತ ಹಾಕುವಂತೆ ಆಮಿಷ ಒಡ್ಡಿ, ಹಣವನ್ನು ಹಂಚಿಕೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್​ ಆಗಿದೆ.

money-distribution-video-viral-in-maski
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಹಣ ಹಂಚಿಕೆ ವಿಡಿಯೋ ವೈರಲ್​

By

Published : Apr 8, 2021, 5:21 PM IST

ರಾಯಚೂರು:ಮಸ್ಕಿ ತಾಲೂಕು ಪಾಮನಕೆಲ್ಲೂರು ಪಂಚಾಯಿತಿಯ ಹರ್ವಾಪುರದಲ್ಲಿ ಮಹಿಳೆಯರನ್ನು ಒಂದೆಡೆ ಸೇರಿಸಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪಗೌಡ ಪಾಟೀಲರಿಗೆ ಮತ ಹಾಕುವಂತೆ ಆಮಿಷ ಒಡ್ಡಿ, ಹಣ ಹಂಚಿಕೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್​ ಆಗಿದೆ.

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಹಣ ಹಂಚಿಕೆ ವಿಡಿಯೋ ವೈರಲ್​

ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಶಿವಮೊಗ್ಗ, ಬೆಂಗಳೂರು ಮೂಲದ ಕಾರ್ಯಕರ್ತರು ಇಲ್ಲಿನ ಮಹಿಳೆಯರಿಗೆ ಆಮಿಷ ಒಡ್ಡಿ, ಒಬ್ಬರಿಗೆ ತಲಾ 200ರಿಂದ 500ರವರೆಗೆ ಹಣವನ್ನು ಹಂಚಿಕೆ ಮಾಡಿದ್ದಾರೆ ಎನ್ನಲಾದ ದೃಶ್ಯ ಸೆರೆಯಾಗಿದೆ.

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಹಣ ಹಂಚಿಕೆ ವಿಡಿಯೋ ವೈರಲ್​

ಪ್ರಧಾನಿ ಮೋದಿಯವರು ಮಹಿಳೆಯರಿಗೆ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದಾರೆ. ಅವುಗಳ ಜೊತೆಗೆ ಮತದಾನಕ್ಕೆ ಮುಂಚೆ ನಿಮಗಾಗಿ ಪ್ರತ್ಯೇಕ ಹಣ ನೀಡುತ್ತೇವೆ. ನೀವು ಅಭ್ಯರ್ಥಿ ಪ್ರತಾಪಗೌಡ ಪಾಟೀಲರಿಗೆ ಮತ ಹಾಕಬೇಕು. ಸಾಲಾಗಿ ಬಂದು ನಾವು ನೀಡುವ ಹಣ ಪಡೆದು ಬಹಿರಂಗ ಸಭೆಗಳಿಗೂ ಬರಬೇಕು ಎಂದು ಹಣ ಹಂಚಲಾಗಿದೆ ಎನ್ನಲಾಗಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ಓದಿ:ಖರೀದಿಸಿದ ಜಮೀನಿನಲ್ಲಿ ಸಿಕ್ತು 5 ಕೆಜಿ ಚಿನ್ನ... ಯಾವ ಕಾಲಕ್ಕೆ ಸೇರಿದ್ದು ಗೊತ್ತಾ!?

ABOUT THE AUTHOR

...view details