ರಾಯಚೂರು: ಹಣ ಹಂಚುವುದು ಬಿಜೆಪಿ ಸಂಸ್ಕೃತಿಯಲ್ಲ. ಅದು ಕಾಂಗ್ರೆಸ್ನ ಪರಂಪರಾಗತ ಸಂಸ್ಕೃತಿಯ ಬಳುವಳಿ ಎಂದು ಮಸ್ಕಿಯಲ್ಲಿ ಬಿಜೆಪಿಯವರ ಎರಡು ಮೂಟೆ ಹಣ ಸಿಕ್ಕಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನವರೇ ಒಂದು ಮತಕ್ಕೆ ಸುಮಾರು 2000 ರೂ.ಗಳನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ದಾಖಲೆಯೆಂಬಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ಮಸ್ಕಿಯ ಎರಡನೇ ವಾರ್ಡ್ನಲ್ಲಿ ಹಣ ಹಂಚಿದ್ದಾರೆ ಎನ್ನಲಾದ ವಿಡಿಯೋವನ್ನು ತೋರಿಸಿದರು.