ಕರ್ನಾಟಕ

karnataka

ETV Bharat / state

ಮಸ್ಕಿ ಬೈ ಎಲೆಕ್ಷನ್​ ಗೆಲ್ಲಲು ಹಣ ಹಂಚಿಕೆ ಆರೋಪ; ಗ್ರಾಮಸ್ಥರಿಂದ ತರಾಟೆ - maski by election latest updates

ಮಸ್ಕಿ ಬೈ ಎಲೆಕ್ಷನ್​ ಹಿನ್ನೆಲೆಯಲ್ಲಿ ಕೆಲವು ಗ್ರಾಮಗಳಲ್ಲಿ ಹಣ ಹಂಚಿಕೆ ಮಾಡಲಾಗ್ತಿದೆ ಎಂಬ ಆರೋಪ ಕೇಳಿ ಬಂದಿದೆ.

money distributing for maski by election alligation
ಹಣ ಹಂಚಿಕೆ

By

Published : Apr 9, 2021, 9:01 AM IST

ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕ್ಷೇತ್ರದಲ್ಲಿ ಹಣ ಹಂಚಲಾಗುತ್ತಿದೆ ಎನ್ನುವ ವಿಡಿಯೋ ವೈರಲ್ ಆಗಿದೆ.

ವೈರಲ್​ ವಿಡಿಯೋ

ಇಲ್ಲಿನ ದುರ್ಗಾಕ್ಯಾಂಪ್, ಮುದಬಾಳ, ಬಳಗಾನೂರು, ಗೌಡನಬಾವಿ ಗ್ರಾಮಗಳಲ್ಲಿ ಜನರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆರ್‌ಎಸ್‌ಎಸ್‌ನವರು ಎಂದು ಹೇಳಿಕೊಂಡಿರುವ ಜನರಿಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ಪ್ರಚಾರ ಮಾಡುವುದಕ್ಕೆ ಬನ್ನಿ, ಹಣ ಹಂಚಿಕೆಗೆ ಬಂದ್ರೆ ಪರಿಸ್ಥಿತಿ ಸರಿ ಇರುವುದಿಲ್ಲ ಎಂದು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ದೃಶ್ಯಗಳು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:ದೆಹಲಿಯ ಗಂಗಾ ರಾಮ್ ಆಸ್ಪತ್ರೆಯ 37 ವೈದ್ಯರಿಗೆ ಕೋವಿಡ್​ ಸೋಂಕು

ABOUT THE AUTHOR

...view details