ರಾಯಚೂರು: 'ನನ್ನನು ಮದುವೆಯಾಗದಿದ್ದರೆ ದೇವದಾಸಿಯನ್ನಾಗಿ ಮಾಡುತ್ತೇನೆ' ಎಂದು ಬಾವ (ಅಕ್ಕನ ಗಂಡ) ಬೆದರಿಕೆ ಹಾಕಿರುವುದಾಗಿ ಜಿಲ್ಲೆಯ ದೇವದುರ್ಗ ತಾಲೂಕು ಚಿಂಚೋಡಿ ಗ್ರಾಮದ ಯುವತಿ ಆರೋಪಿಸಿದ್ದಾಳೆ. ಅಕ್ಕನ ಗಂಡ ಶಾಂತಪ್ಪ ಎಂಬಾತ ಮದುವೆಯಾಗುವಂತೆ ಪೀಡಿಸುತ್ತಿದ್ದು, ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾನೆ ಎಂದು ಹೇಳಿದ್ದಾಳೆ.
ಶಾಂತಪ್ಪ ಈಗಾಗಲೇ ಯುವತಿಯ ಅಕ್ಕನ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈಗ ನನನ್ನು ಮದುವೆಯಾಗು ಎಂದು ಯುವತಿಗೆ ಹಿಂಸೆ ನೀಡುತ್ತಿದ್ದಾನಂತೆ. ಈತನ ಕಾಟ ತಾಳಲಾರದೆ ಯುವತಿ ಯಾದಗಿರಿ ಜಿಲ್ಲೆ ಸುರಪುರದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿಗಳು ಯುವತಿಯನ್ನ ರಕ್ಷಿಸಿದ್ದಾರೆ.