ಕರ್ನಾಟಕ

karnataka

ETV Bharat / state

ಮೋದಿ ಪದಗ್ರಹಣ ... ನಮೋ ಅಭಿಮಾನಿಗಳಿಂದ ಮಂತ್ರಾಲಯದವರೆಗೆ ಪಾದಯಾತ್ರೆ - Kannada news

ಮೋದಿಯವರಿಗೆ ದೇವರು ಆರೋಗ್ಯ ಕಲ್ಪಿಸಿ, ಆಡಳಿತ ನಡೆಸುವಲ್ಲಿ ಯಶಸ್ಸು ಕಾಣಲೆಂದು ಮಂತ್ರಾಲಯದವರೆಗೆ ಬಿಜೆಪಿ ಮುಖಂಡರು ಮತ್ತು ಮೋದಿ ಅಭಿಮಾನಿಗಳು ಪಾದಯಾತ್ರೆ ಕೈಗೊಂಡಿದ್ದಾರೆ.

ನಮೋ ಅಭಿಮಾನಿಗಳಿಂದ ಮಂತ್ರಾಲಯದವರೆಗೆ ಪಾದಯಾತ್ರೆ

By

Published : May 30, 2019, 3:13 PM IST

ರಾಯಚೂರು :ನರೇಂದ್ರ ಮೋದಿ ಪ್ರಧಾನಿಯಾಗಿ ಎರಡನೇ ಅವಧಿಗೆ ಪ್ರಮಾಣ ಸ್ವೀಕಾರ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಮೋದಿ ಅಭಿಮಾನಿಗಳಿಂದ ಸಿಹಿ ಹಂಚಿ, ಮಂತ್ರಾಲಯಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ನಮೋ ಅಭಿಮಾನಿಗಳಿಂದ ಮಂತ್ರಾಲಯದವರೆಗೆ ಪಾದಯಾತ್ರೆ

ಸಿಂಧನೂರು ನಗರದಲ್ಲಿ ಬಿಜೆಪಿಯ ಮೋದಿ ಅಭಿಮಾನಿಗಳಿಂದ 5000 ಸಾವಿರ ಲಾಡು ತಯಾರಿಸಿ, ಹಂಚಿಕೆ ಮಾಡಿ ಸಂಭ್ರಮಿಸಿದ್ದರು. ಬಳಿಕ ಮೋದಿಯವರಿಗೆ ದೇವರು ಆರೋಗ್ಯ ಕಲ್ಪಿಸಿ, ಸರಕಾರ ನಡೆಸುವಲ್ಲಿ ಯಶಸ್ಸು ಕಾಣಲೆಂದು ಹರಕೆ ಹೊತ್ತಿದ್ದು, ನಗರದ ಎಪಿಎಂಸಿ ಗಣೇಶ ದೇವಾಲಯದಿಂದ ಮೆರವಣಿಗೆ ಮೂಲಕ ಪಾದಯಾತ್ರೆ ಆರಂಭಿಸಿದ್ದಾರೆ. ಇದರ ಮಧ್ಯೆ ದಾರಿಯಲ್ಲಿ ಲಾಡು ಹಂಚಿಕೆ ಮಾಡಿಕೊಂಡು ಯಾತ್ರೆ ಆರಂಭಿಸಿದ್ರು. ಪಾದಯಾತ್ರೆಯಲ್ಲಿ ಬಿಜೆಪಿ ಮುಖಂಡರು, ಮೋದಿ ಅಭಿಮಾನಿಗಳು ಭಾಗವಹಿಸಿದ್ದಾರೆ.

ABOUT THE AUTHOR

...view details