ರಾಯಚೂರು: ಪ್ರಧಾನಿ ಮೋದಿ ರಾಯಚೂರಿಗೆ ಬಂದಿಳಿದ ಹೆಲಿಪ್ಯಾಡ್ನಲ್ಲಿ ಅವರೊಂದಿಗೆ ಬಂದಿದ್ದ ಮೂರನೇ ಭದ್ರತಾ ಸೇನಾ ಹೆಲಿಕಾಪ್ಟರ್ ಸಿಲುಕಿಕೊಂಡಿರುವ ಘಟನೆ ಇಂದು ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹೊಸಹಳ್ಳಿ ಕ್ಯಾಂಪ್‌ನಲ್ಲಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಸಮಾರಂಭವನ್ನು ಆಯೋಜಿಸಲಾಗಿತ್ತು. ಪ್ರಚಾರಕ್ಕೆಂದು ಪ್ರಧಾನಿ ಮೋದಿ ಬಂದ ಹೆಲಿಕಾಪ್ಟರ್ಗಳ ಪೈಕಿ ಮೂರನೇ ಸೇನಾ ಹೆಲಿಕಾಪ್ಟರ್ ಸಿಲುಕಿಕೊಂಡಿದೆ.
ಹೆಲಿಪ್ಯಾಡ್ನಲ್ಲಿ ಸಿಲುಕಿಕೊಂಡ ಮೋದಿ ಭದ್ರತಾ ಸೇನಾ ಹೆಲಿಕಾಪ್ಟರ್: ಚಾಪರ್ ಮೇಲಕ್ಕೆತ್ತಲು ಭರದ ಕಾರ್ಯಾಚರಣೆ - ಪ್ರಧಾನಿ ಮೋದಿ ರಾಯಚೂರಿಗೆ
ಜೆಸಿಬಿ ಹಾಗೂ 50 ಜನ ಸೇರಿ ಹೆಲಿಕಾಪ್ಟರ್ ಮೇಲಕ್ಕೆತ್ತುವ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ.
ಮಳೆಯ ಪರಿಣಾಮದಿಂದಾಗಿ ಹೆಲಿಪ್ಯಾಡ್ ಸಂಪೂರ್ಣ ಜಲಾವೃತವಾಗಿತ್ತು. ಅವಸರದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ಅದರಲ್ಲಿ ಪ್ರಧಾನಿ ಭದ್ರತಾ ಸೇನಾ ಹೆಲಿಕಾಪ್ಟರ್ ಸಿಲುಕಿಕೊಂಡಿದೆ. ಇದನ್ನು ಮೇಲೆತ್ತಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಹೆಲಿಕಾಪ್ಟರ್ ಮೇಲಕ್ಕೆತ್ತಲು ಜೆಸಿಬಿಗಳು ಬಂದಿವೆ. ಮೇಲೆಕ್ಕೆತ್ತುವ ಕಾರ್ಯಾಚರಣೆ ಆರಂಭಿಸಲಾಗಿದ್ದು, 50 ಕ್ಕೂ ಹೆಚ್ಚು ಜನರಿಂದ ಹೆಲಿಕಾಪ್ಟರ್ ಮೇಲೆಕ್ಕೆತ್ತುವ ಕಾರ್ಯ ಶುರು ಮಾಡಿದ್ದಾರೆ. ಎಡಭಾಗಕ್ಕೆ ಸಂಪೂರ್ಣವಾಲಿರುವ ಹೆಲಿಕಾಪ್ಟರ್ ಎಷ್ಟೇ ಪ್ರಯತ್ನಿಸಿದರೂ ಮೇಲಕ್ಕೆ ಏಳುತ್ತಿಲ್ಲ. ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಿರುವ ಸ್ಥಳ ಗದ್ದೆಯಂತೆ ಆಗಿದೆ.
ಇದನ್ನೂ ನೋಡಿ:ಅಂದು ಶ್ರೀರಾಮನನ್ನು ಬಂಧಿಸಿಟ್ಟಿದ್ದರು, ಈಗ ಬಜರಂಗದಳ ಕಾರ್ಯಕರ್ತರ ಬಂಧನಕ್ಕೆ ಕಾಂಗ್ರೆಸ್ ಸಂಕಲ್ಪ ಮಾಡಿದೆ : ಮೋದಿ ವಾಗ್ದಾಳಿ