ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಆರಂಭವಾಗಿರೋ ಮೋದಿ ಜೀ ಕ್ಯಾಂಟೀನ್​ಗೆ ಸಖತ್​ ರೆಸ್ಪಾನ್ಸ್​ - viss, bites and script

ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಮೋದಿ ಅಭಿಮಾನಿಯೊಬ್ಬರು ಮೋದಿ ಜೀ ಕ್ಯಾಂಟೀನ್ ​ ಆರಂಭಿಸಿದ್ದು, ಗ್ರಾಹಕರಿಗೆ ಕಡಿಮೆ ದರದಲ್ಲಿ ಉಪಹಾರ ನೀಡುತ್ತಿದ್ದಾರೆ.

ರಾಯಚೂರಲ್ಲಿ ಆರಂಭವಾಗಿದೆ ಮೋದಿ ಜೀ ಕ್ಯಾಂಟೀನ್

By

Published : Jun 9, 2019, 3:33 PM IST

ರಾಯಚೂರು: ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಮೋದಿ ಜೀ ಕ್ಯಾಂಟಿನ್ ಕೆಲ ದಿನಗಳಿಂದ ಪ್ರಾರಂಭಗೊಂಡಿದ್ದು,ಈ ಕ್ಯಾಂಟೀನ್​ನಲ್ಲಿ ಬೇರೆ ಕ್ಯಾಂಟೀನ್​​ಗಿಂತ ಕಡಿಮೆ ದರದಲ್ಲಿ ಊಟ ಹಾಗೂ ಉಪಹಾರ ನೀಡಲಾಗ್ತಿದೆ.

ರಾಯಚೂರಲ್ಲಿ ಆರಂಭವಾಗಿದೆ ಮೋದಿ ಜೀ ಕ್ಯಾಂಟೀನ್

ಮೋದಿ ಅಭಿಮಾನಿಯಾಗಿರುವ ಹೋಟೆಲ್​ ಮಾಲೀಕ ಆದಿತ್ಯಗೌಡ, ಇದರಿಂದ ಲಾಭ ಸಿಗುವುದು ಕಡಿಮೆಯಾದ್ರೂ ನಾನು ಮೋದಿಯ ಅಭಿಮಾನಿ. ದೇಶದ ಐಕಾನ್ ಆಗಿರುವ ಅವರ ಹೆಸರಿನಲ್ಲಿ ಶುದ್ದವಾದ ಕುಡಿಯುವ ನೀರು, ಕಡಿಮೆ ದರದಲ್ಲಿ ಊಟ, ಉಪಹಾರದ ವ್ಯಾಪಾರ ಪ್ರಾರಂಭಿಸಿ, ಮೋದಿ ಜೀಯವರ ಹೆಸರು ಇಟ್ಟಿದ್ದಾನೆ. ನನ್ನ ಹೆಸರಿನಲ್ಲಿ ಕ್ಯಾಂಟೀನ್ ನಡೆಯುವುದು ಕಷ್ಟ. ಆದರೆ, ಮೋದಿಜೀಯವರ ಹೆಸರು ಇಟ್ಟರೆ ಗ್ರಾಹಕರು ಬರುತ್ತಾರೆ ಅಂತಾ ಮೋದಿ ಜೀ ಕ್ಯಾಂಟಿನ್ ಆರಂಭಿಸಿದ್ದಾನೆ ಎಂದಿದ್ದಾರೆ. ಈ ಕ್ಯಾಂಟೀನ್​ನಲ್ಲಿ ಬೆಳಗ್ಗೆ 6 : 30 ರಿಂದ 2 : 30ವರೆಗೆ ಉಪಹಾರವಾಗಿ ಇಡ್ಲಿ, ಚಿತ್ರಾನ್ನ,ಉಪ್ಪಿಟ್ಟು, ಮೈಸೂರ ಬೋಂಡಾ, ಪೂರಿ, ಮಸಾಲ ರೈಸ್, ಪುಳಿಯೋಗರೆ, ಪಡ್ಡು, ಪಲಾವ್, ದೋಸೆ, ಶಿರಾ ತಯಾರು ಮಾಡಲಾಗುತ್ತಿದ್ದು ಇವುಗಳ ಬೆಲೆ ಪ್ಲೇಟ್‌ಗೆ 10 ರೂಪಾಯಿ. ಮಧ್ಯಾಹ್ನ 1ಗಂಟೆಯಿಂದ ಸಂಜೆ 4 ಗಂಟೆಯವರೆಗೆ 2 ಚಪಾತಿ ಅನ್ನ ಸಾಂಬಾರ್​, 2 ರೊಟ್ಟಿ ಅನ್ನ ಸಾಂಬಾರ್, 2 ರಾಗಿ ಮುದ್ದೆ ಅನ್ನ ಸಾಂಬಾರ್​ ಊಟಕ್ಕೆ 40 ರೂಪಾಯಿ ದರ ನಿಗದಿ ಮಾಡಲಾಗಿದ್ದು, ಫುಲ್ ಮಿಲ್ಸ್ ನೀಡಲಾಗುತ್ತಿದೆ.

ವಿಶೇಷವಾಗಿ ಯೋಧರು ಈ ಕ್ಯಾಂಟೀನ್​ಗೆ ಉಪಹಾರ ಮತ್ತು ಊಟಕ್ಕೆ ಬಂದ್ರೆ ಉಚಿತವಾಗಿ ನೀಡಲಾಗುತ್ತಿದ್ದು, 2019 ಜೂನ್​ 7ರಿಂದ ಪ್ರಾರಂಭವಾಗಿರುವ ಮೋದಿಜೀ ಕ್ಯಾಂಟಿನ್​ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆಯಂತೆ. ಇಲ್ಲಿ ಊಟ ಮಾಡಿದ ಗ್ರಾಹಕರು ಕೂಡ ಮಾರುಕಟ್ಟೆಗೆ ಹೋಲಿಕೆ ಮಾಡಿದ್ರೆ ಇಲ್ಲಿ ದರ ಕಡಿಮೆಯಿದೆ, ಊಟ ಕೂಡ ಶುಚಿ,ರುಚಿಯಾಗಿದೆ ಎಂದಿದ್ದಾರೆ.

For All Latest Updates

ABOUT THE AUTHOR

...view details