ರಾಯಚೂರು: ಸೆಂಟರ್ ಫಾರ್ ಎಂಪ್ಲಾಯ್ಮೆಂಟ್ ಆಪರ್ಚುನಿಟಿ ಅಂಡ್ ಲರ್ನಿಂಗ್ (ಸಿಯೋಲ್) ರಾಯಚೂರು ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಗೆಜೆಟೆಡ್ ಪ್ರೋಬೆಷನರಿ ಅಭ್ಯರ್ಥಿಗಳಿಗಾಗಿ ಅಣಕು ಮೌಖಿಕ ಸಂದರ್ಶನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದ ಮೂರ್ತಿ ಚಾಲನೆ ನೀಡಿದರು.
ಗೆಜೆಟೆಡ್ ಪ್ರೋಬೆಷನರಿ ಅಭ್ಯರ್ಥಿಗಳಿಗೆ ಅಣಕು ಮೌಖಿಕ ಸಂದರ್ಶನ
ರಾಯಚೂರು ಜಿಲ್ಲಾ ಕ್ರೀಡಾಂಗಣದಲ್ಲಿಂದು 2015ನೇ ಗೆಜೆಟೆಡ್ ಪ್ರೋಬೆಷನರಿ ಅಧಿಕಾರಿಗಳ ಹುದ್ದೆಯ ಮೌಖಿಕ ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗಾಗಿ ಮಾರ್ಗದರ್ಶನ ಮತ್ತು ಅಣಕು ಮೌಖಿಕ ಸಂದರ್ಶನದ ಕಾರ್ಯಾಗಾರ ನಡೆಸಲಾಯಿತು.
ಮೌಖಿಕ ಸಂದರ್ಶನ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳು ಶಿಸ್ತು, ಸಂಯಮ ಗುಣ ಅಳವಡಿಸಿಕೊಳ್ಳಬೇಕು ಹಾಗೂ ಮುಂದೆ ಅಧಿಕಾರಕ್ಕೆ ಬರುವವರಿದ್ದು, ಜನಪರ ಕಾಳಜಿ ವಹಿಸುವಂತವರಾಗಬೇಕು ಎಂದು ಸಲಹೆ ನೀಡಿ ಬಳಿಕ ಅಭ್ಯರ್ಥಿಗಳ ಸಂದರ್ಶನ ಮಾಡಿದರು.
ಪ್ರಚಲಿತ ವಿದ್ಯಾಮಾನ, ಕನ್ನಡ ಸಾಹಿತ್ಯದಲ್ಲಿ ದಾಸ, ಬಂಡಾಯ, ಏಕಿಕರಣದ ಹಾಗೂ ಮುಖ್ಯವಾಗಿ ಪಕ್ಷಾಂತರ ನಿಷೇಧ ಕಾಯ್ದೆ, ಶಾಸಕರ ಅನರ್ಹತೆಯ ಕುರಿತ ಪ್ರಶ್ನೆಗಳನ್ನು ಕೇಳಲಾಯಿತು. ಜೊತೆಗೆ ಆತ್ಮವಿಶ್ವಾಸ, ತಾಳ್ಮೆಯ ಗುಣದ ಬಗ್ಗೆ ತಿಳಿಸಲಾಯಿತು.