ರಾಯಚೂರು:ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಕಾಲುವೆಗಳಿಗೆ ನೀರು ಪೂರೈಕೆ ಮಾಡಲು ಕ್ರಮಕೈಗೊಳ್ಳುವಂತೆ ಎಂಎಲ್ಸಿ ಎನ್ ಎಸ್ ಬೋಸರಾಜ್ ನೇತೃತ್ವದಲ್ಲಿ ರೈತರನ್ನೊಳಗೊಂಡ ನಿಯೋಗ ಜಿಲ್ಲಾಧಿಕಾರಿ ಭೇಟಿ ಮಾಡಿದೆ.
ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಕಾಲುವೆಗೆ ನೀರು ಪೂರೈಸಲು ಮನವಿ.. - raichur news
ಒಂದು ವೇಳೆ ನೀರು ದೊರೆಯದೆ ಇದ್ದಲ್ಲಿ ರೈತರು ಎದುರಾಗುವ ಕಷ್ಟಗಳನ್ನ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತರಲಾಯಿತು. ನಿಯೋಗದ ಮನವಿ ಆಲಿಸಿದ ಜಿಲ್ಲಾಧಿಕಾರಿ ಆರ್.ವೆಂಕಟೇಶ ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೆಳ ಭಾಗದ ರೈತರಿಗೆ ನೀರು ಒದಗಿಸುವ ಪೂರೈಕೆ ಮಾಡುವ ಹಿನ್ನೆಲೆಯಲ್ಲಿ ನಿಯೋಗ ಭೇಟಿ ಮಾಡಿ ಚರ್ಚಿಸಲಾಯಿತು. ತುಂಗಭದ್ರಾ ಎಡದಂಡ ಕಾಲುವೆಯ 69ನೇ ಮೈಲಿಗೆ ಕನಿಷ್ಠ ಸಾವಿರ ಕ್ಯೂಸೆಕ್ ನೀರು ಹರಿಸಿದರೆ, ಈಗಿರುವ ಬೆಳೆಗಳಿಗೆ ಅನುಕೂಲವಾಗುತ್ತದೆ. ಒಂದು ವೇಳೆ ನೀರು ದೊರೆಯದೆ ಇದ್ದಲ್ಲಿ ರೈತರು ಎದುರಾಗುವ ಕಷ್ಟಗಳನ್ನ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತರಲಾಯಿತು. ನಿಯೋಗದ ಮನವಿ ಆಲಿಸಿದ ಜಿಲ್ಲಾಧಿಕಾರಿ ಆರ್.ವೆಂಕಟೇಶ ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ರೈತ ಮುಖಂಡ ಚಾಮರಸ ಪಾಟೀಲ್, ಪ್ರಗತಿಪರ ಸಂಘಟನೆ ಮುಖಂಡ ರಾಘವೇಂದ್ರ ಕುಷ್ಠಗಿ ಸೇರಿ ಹಲವು ಮುಖಂಡರು, ರೈತರು ಇದ್ದರು.