ರಾಯಚೂರು: ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಾನಿಗೊಳಗಾಗಿರುವುದರಿಂದ ನಗರ ಶಾಸಕ ಡಾ. ಎಸ್.ಶಿವರಾಜ್ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.
ಮಳೆ ಹಾನಿ ಪ್ರದೇಶಗಳಿಗೆ ಶಾಸಜ ಶಿವರಾಜ್ ಪಾಟೀಲ್ ಭೇಟಿ, ಪರಿಶೀಲನೆ - ಮಳೆ ಹಾನಿ ಪ್ರದೇಶಗಳಿಗೆ ಶಾಸಜ ಶಿವರಾಜ್ ಪಾಟೀಲ್ ಭೇಟಿ
ರಾಯಚೂರಿನಲ್ಲಿ ಭಾರೀ ಮಳೆ ಸುರಿದಿರುವ ಪರಿಣಾಮ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆ ಹಾನಿ ಪ್ರದೇಶಗಳಿಗೆ ಶಾಸಜ ಶಿವರಾಜ್ ಪಾಟೀಲ್ ಭೇಟಿ
ನಗರದ ಜಲಾಲ್ ನಗರ, ಸಿಯಾತಲಾಬ್, ಬಸವನಬಾವಿ ವೃತ್ತ ಸೇರಿದಂತೆ ನಗರದ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಪರಿಹಾರ ಕ್ರಮ ಕೈಗೊಳ್ಳಲು ಅಧಿಕಾರಿಗೆ ಸೂಚಿಸಿದರು.
ನಗರದ ಹಲವಾರು ವಾರ್ಡ್ಗಳಲ್ಲಿ ಕಳೆದ ರಾತ್ರಿ ಸುರಿದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸಿದ್ದು, ಮನೆಯಲ್ಲಿ ಇರುವ ದವಸ ಧಾನ್ಯಗಳು ಹಾಳಾಗಿವೆ. ಕೂಡಲೇ ಪರಿಹಾರ ಕೇಂದ್ರ ಆರಂಭಿಸಬೇಕು ಎಂದು ಆದೇಶಿಸಿದ್ದಾರೆ.