ಕರ್ನಾಟಕ

karnataka

ETV Bharat / state

ದಯವಿಟ್ಟು ಮನೆಯಲ್ಲೇ ಇರಿ : ಜನರಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ ಮನವಿ - mla shivraj patil

ಜಿಲ್ಲೆಗೆ ಅವಶ್ಯಕ ಇರುವವರಿಗೆ ಆಮ್ಲಜನಕ ಪೂರೈಕೆಗೆ ಸರ್ಕಾರ ಕ್ರಮಕೈಗೊಂಡಿದ್ದು, ವಾತಾವರಣ ಬಹಳ ವಿಷಮವಾಗಿದೆ. ದೇವರು ಬಂದರೂ ಕಾಪಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ದಯವಿಟ್ಟು ಜನರು ರೋಗದ ಬಗ್ಗೆ ನಿಷ್ಕಾಳಜಿ ಮಾಡದಿರಿ. .

shivraj
shivraj

By

Published : May 5, 2021, 8:52 PM IST

Updated : May 5, 2021, 11:06 PM IST

ರಾಯಚೂರು : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ಸರಪಳಿ ತಡೆಯಲು ಜನರು ಅನಾವಶ್ಯಕವಾಗಿ ತಿರುಗಾಡುವುದನ್ನು ನಿಲ್ಲಿಸಬೇಕು ಎಂದು ನಗರ ಶಾಸಕ ಡಾ.ಶಿವರಾಜ್ ಪಾಟೀಲ ಕೈ ಮುಗಿದು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೀಗೆ ಹೆಚ್ಚಾದಲ್ಲಿ ಮುಂದಿನ ದಿನಗಳಲ್ಲಿ ರೋಗಿಗಳಿಗೆ ಹಾಸಿಗೆಗಳ ಕೊರತೆ ಎದುರಾಗಲಿದೆ. ಈವರೆಗೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಕೊರತೆ ಉಂಟಾಗಿಲ್ಲ.

ದಯವಿಟ್ಟು ಮನೆಯಲ್ಲೇ ಇರಿ : ಜನರಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ ಮನವಿ

ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದು, ಜಿಲ್ಲಾಡಳಿತವು ರೋಗಿಗಳಿಗೆ ಅವಶ್ಯಕ ಇರುವ ಸಕಲ ಕ್ರಮ ಕೈಗೊಂಡಿದ್ದರೂ, ಕೊರೊನಾ ಸರಪಳಿ ತಡೆಯಲು ಜನರು ಅನಾವಶ್ಯಕವಾಗಿ ಹೊರಗಡೆ ತಿರುಗಾಡುವುದನ್ನು ನಿಲ್ಲಿಸಬೇಕು ಎಂದ್ರು.

ಜಿಲ್ಲೆಗೆ ಅವಶ್ಯಕ ಇರುವವರಿಗೆ ಆಮ್ಲಜನಕ ಪೂರೈಕೆಗೆ ಸರ್ಕಾರ ಕ್ರಮಕೈಗೊಂಡಿದ್ದು, ವಾತಾವರಣ ಬಹಳ ವಿಷಮವಾಗಿದೆ. ದೇವರು ಬಂದರೂ ಕಾಪಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ದಯವಿಟ್ಟು ಜನರು ರೋಗದ ಬಗ್ಗೆ ನಿಷ್ಕಾಳಜಿ ಮಾಡದಿರಿ.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇದೆ, ಜನರು ಅನಾವಶ್ಯಕವಾಗಿ ತಿರುಗಾಡದೆ, ಅವಶ್ಯಕತೆ ಇದ್ದಾಗ ಮಾತ್ರ ಹೊರಗಡೆ ಬರಬೇಕು ಎಂದು ಕೈ ಮುಗಿದು ಮನವಿ ಮಾಡಿದರು.

Last Updated : May 5, 2021, 11:06 PM IST

ABOUT THE AUTHOR

...view details