ರಾಯಚೂರು:ಶಾಸಕ ಡಾ.ಶಿವರಾಜ ಪಾಟೀಲ ಮಹಾಶಿವರಾತ್ರಿ ನಿಮಿತ್ತ ಆಯೋಜಿಸಿದ್ದ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವನಾಮ ಸ್ಮರಣೆ ಮಾಡಿದರು.
ಶಿವನಾಮ ಸ್ಮರಣೆ ಮಾಡಿದ ಶಾಸಕ ಡಾ. ಶಿವರಾಜ ಪಾಟೀಲ - ಶಾಸಕ ಡಾ.ಶಿವರಾಜ್ ಪಾಟೀಲ್ ಲೇಟೆಸ್ಟ್ ನ್ಯೂಸ್
ಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಧಾರ್ಮಿಕ ಭಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಶಾಸಕರು ಭಾಗವಹಿಸಿ, ಭಜನೆ ಹಾಡಿಗೆ ತಾಳ ಹಾಕುವ ಮೂಲಕ ಗಮನ ಸೆಳೆದರು.
MLA Shivraj Patil participate in Bhajane at Raichur
ನಗರದ ಐತಿಹಾಸಿಕ ಶ್ರೀಚಂದ್ರಮೌಳೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ಧಾರ್ಮಿಕ ಭಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಶಾಸಕರು ಭಾಗವಹಿಸಿ, ಭಜನೆ ಹಾಡಿಗೆ ತಾಳ ಹಾಕುವ ಮೂಲಕ ಗಮನ ಸೆಳೆದರು.
ಈ ವೇಳೆ ಮಾತನಾಡಿದ ಶಾಸಕರು, ಬಡಾವಣೆಗಳಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸೌಹಾರ್ದತೆ, ಏಕತೆ, ಸಾಮರಸ್ಯ ಸೇರಿದಂತೆ ಒಳ್ಳೆಯ ವಾತಾವರಣಕ್ಕೆ ನಾಂದಿಯಾಗಲಿದೆ. ಇಂತಹ ಆಚರಣೆಗಳು ಎಲ್ಲಾ ಬಡಾವಣೆಗಳಲ್ಲಿ ನಡೆದರೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದರು.