ರಾಯಚೂರು: ಕೊರೊನಾ ಸೋಂಕಿತರಿಗೆ ಸಿದ್ದಪಡಿಸಿರುವ ಐಸೋಲೇಷನ್ ವಾರ್ಡ್ ಮನೆಗೆ ಬಳಸುವ ಮಂಚಗಳನ್ನು ಬಳಕೆ ಮಾಡಿರುವುದಕ್ಕೆ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಿಮ್ಸ್ ಆಸ್ಪತ್ರೆಯಲ್ಲಿನ ವ್ಯವಸ್ಥೆ ಬಗ್ಗೆ ಶಾಸಕ ಶಿವರಾಜ್ ಪಾಟೀಲ್ ಅಸಮಾಧಾನ - MLA Shivraj Patil
ರಿಮ್ಸ್ ಆಸ್ಪತ್ರೆಯಿಂದ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಧಾನ ಹಾಗೂ ಕ್ರಮ ಕೈಗೊಳ್ಳುವ ಕುರಿತು ಅಲ್ಲಿನ ವೈದ್ಯರು, ರಿಮ್ಸ್ ಮುಖ್ಯಸ್ಥರೊಂದಿಗೆ ವಿಚಾರಣೆ, ಪರಿಶೀಲನೆ ನಡೆಸಿದರು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಿಮ್ಸ್ ಆಸ್ಪತ್ರೆಯಿಂದ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಧಾನ ಹಾಗೂ ಕ್ರಮ ಕೈಗೊಳ್ಳುವ ಕುರಿತು ಅಲ್ಲಿನ ವೈದ್ಯರು, ರಿಮ್ಸ್ ಮುಖ್ಯಸ್ಥರೊಂದಿಗೆ ವಿಚಾರಣೆ, ಪರಿಶೀಲನೆ ನಡೆಸಿದರು. ಈ ವೇಳೆ , ಓಪೆಕ್ನಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ಸಿದ್ದಪಡಿಸಿದ ಮಂಚಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಸೂಕ್ತವಲ್ಲದೇ, ಮನೆಯಲ್ಲಿ ಬಳಸುವ ಮಂಚದಂತೆ ಸಿದ್ದಪಡಿಸಿರುವುದಕ್ಕೆ ರಿಮ್ಸ್ ನಿರ್ದೇಶಕರು, ವೈದ್ಯಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.
ಈ ಕೂಡಲೇ ರೋಗಿಗಳಿಗೆ ಚಿಕಿತ್ಸೆ ನೀಡುವ ಮಂಚಗಳನ್ನು ಬಳಸಿ, ಈಗ ನೀಡಿರುವ ಮಂಚಗಳ ಪೂರೈಕೆ ಮಾಡಿದ ಬಿಲ್ ತಡೆಯಿರಿ ಎಂದು ರಿಮ್ಸ್ ನಿರ್ದೇಶಕರಿಗೆ ತಿಳಿಸಿದರು.