ರಾಯಚೂರು: ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಿಗೆ ಹಾನಿ ಉಂಟಾಗಿದ್ದು, ಇಂದು ಬಡಾವಣೆಗಳಿಗೆ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.
ಮಳೆಯಿಂದ ಹಾನಿಗೊಳಗಾದ ಬಡಾವಣೆಗಳಿಗೆ ಶಾಸಕ ಶಿವರಾಜ್ ಪಾಟೀಲ್ ಭೇಟಿ - MLA Shivaraja Patil city round
ಮಳೆಯಿಂದ ಹಾನಿಗೊಳಗಾದ ಬಡಾವಣೆಗಳಿಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಭೇಟಿ ನೀಡಿ, ಪರಿಶೀಲಿಸಿದರು.
Raichur
ನಗರದ ತಗ್ಗು ಪ್ರದೇಶಗಳಾದ ಸೀಯಾತಲಾಬ, ಜಹಿರಾಬಾದ್, ಕಾಕಿನ ಕೆರೆ, ಬಸವನ ಬಾವಿ ವೃತ್ತ, ನೀರಬಾವಿ ಕುಂಟ ಸೇರಿದಂತೆ ಇತರೆ ಬಡಾವಣೆಯಲ್ಲಿ ಮಳೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿತ್ತು. ಈ ಕುರಿತು ಪರಿಶೀಲನೆ ನಡೆಸಲು ಶಾಸಕರು ಭೇಟಿ ನೀಡಿದ್ದರು.
ಈ ಬಡಾವಣೆಗಳಲ್ಲಿ ಮುಂದಿನ ದಿನಗಳಲ್ಲಿ ಇಂತಹ ತೊಂದರೆಯಾಗದ ರೀತಿಯಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವ ಕುರಿತು ಜನರಿಂದ ಮಾಹಿತಿ ಪಡೆದರು. ಬಳಿಕ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.