ಸೇಡಂ: ಕೊರೊನಾ ಮಹಾಮಾರಿ ದೂರವಾಗಿಸುವ ನಿಟ್ಟಿನಲ್ಲಿ ಕರೆ ನೀಡಲಾಗಿದ್ದ ಇಷ್ಟಲಿಂಗ ಪೂಜೆಯನ್ನು ಶಾಸಕ ರಾಜಕುಮಾರ ಪಾಟೀಲ ತೇಲ್ಕುರ ತಮ್ಮ ಮನೆಯಲ್ಲಿ ಕುಟುಂಬ ಸಮೇತರಾಗಿ ನೆರವೇರಿಸಿದ್ದಾರೆ.
ಇಷ್ಟಲಿಂಗ ಪೂಜೆ ಸಲ್ಲಿಸಿದ ಶಾಸಕ ರಾಜಕುಮಾರ ಪಾಟೀಲ್ - MLA Rajkumar patil Telkur worship Shiva
ಪೂಜೆ ಮಾಡಿ ಸಕಲ ಜೀವಾತ್ಮಗಳಿಗೆ ಕೊರೊನಾದಿಂದ ಮುಕ್ತಿ ಕಲ್ಪಿಸುವಂತೆ ಶಾಸಕ ರಾಜಕುಮಾರ ಪಾಟಿಲ ತೆಲ್ಕುರ ಶಿವನಲ್ಲಿ ಪ್ರಾರ್ಥಿಸಿದರು.
ಇಷ್ಟಲಿಂಗ ಪೂಜೆ ಸಲ್ಲಿಸಿದ ಶಾಸಕ ರಾಜಕುಮಾರ ಪಾಟೀಲ್ ತೆಲ್ಕುರ
ಪೂಜೆ ಬಳಿಕ ಮಾತನಾಡಿದ ಅವರು, ವೀರಶೈವ ಸಮಾಜದ ಪೂಜ್ಯರು ಕರೆ ನೀಡಿರುವ ಇಷ್ಟಲಿಂಗ ಪೂಜೆಯನ್ನು ಲಕ್ಷಾಂತರ ಜನ ನೆರವೇರಿಸಿದ್ದಾರೆ. ಅದರಂತೆ ಸಹಜಶಿವಯೋಗದ ಮುಖಾಂತರ ಇಷ್ಟಲಿಂಗ ಪೂಜೆ ಮಾಡಿ ಸಕಲ ಜೀವಾತ್ಮಗಳಿಗೆ ಕೊರೊನಾದಿಂದ ಮುಕ್ತಿ ಕಲ್ಪಿಸುವಂತೆ ಶಿವನಲ್ಲಿ ಕೋರಿರುವುದಾಗಿ ತಿಳಿಸಿದ್ದಾರೆ.