ಕರ್ನಾಟಕ

karnataka

ETV Bharat / state

ನಿಮಗೆ ನಾಚಿಕೆಯಾಗಲ್ವಾ?, ನೀವು ಮನುಷ್ಯರಾ?: ಜೆಸ್ಕಾಂ ಅಧಿಕಾರಿಗಳಿಗೆ ಶಾಸಕ ತರಾಟೆ - MLA K.Shivanagouda leader outrage against to Jesscom officials

ಜಾಗದ ಸಮಸ್ಯೆ ಎದುರಾದ್ರೂ ಜಾಗವನ್ನ ಕೊಡಿಸುವ ಕೆಲಸ ಮಾಡುವುದಾಗಿ ಹೇಳಿದ್ದೇನೆ. ಆದ್ರೂ ಸ್ಟೇಷನ್ ಸ್ಥಾಪನೆಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳ ಮೇಲೆ ಕಿಡಿಕಾರಿದರು..

mla-kshivanagouda
ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ

By

Published : Jan 25, 2021, 6:34 PM IST

ರಾಯಚೂರು :ನಿಮಗೆ ನಾಚಿಕೆಯಾಗಲ್ವಾ?, ನೀವು ಮನುಷ್ಯರಾ?, ಹೊಟ್ಟೆಗೆ ಏನು ಊಟ ಮಾಡುತ್ತೀರಿ? ಸಚಿವ ಮಧುಸ್ವಾಮಿ ಭಾಷೆಯಲ್ಲಿ ಪದ ಪ್ರಯೋಗ ಮಾಡಬೇಕಾ? ಹೀಗೆ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಜೆಸ್ಕಾಂ ಅಧಿಕಾರಿಗಳಿಗೆ ಕೆಡಿಪಿ ಸಭೆಯಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.

ಜೆಸ್ಕಾಂ ಅಧಿಕಾರಿಗಳಿಗೆ ಶಾಸಕ ತರಾಟೆ ತೆಗೆದುಕೊಂಡಿದ್ದಾರೆ..

ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ದೇವದುರ್ಗ ಪಟ್ಟಣಕ್ಕೆ 220 ಕೆವಿ ಸ್ಟೇಷನ್, ತಾಲೂಕಿನ ಮಸರಕಲ್ ಗ್ರಾಮಕ್ಕೆ 110 ಕೆವಿ ಸ್ಟೇಷನ್ ಮಂಜೂರಾಗಿ 14 ವರ್ಷ ಗತಿಸಿವೆ. ಮಂಜೂರು ಆಗಿರುವ ಸ್ಟೇಷನ್ ಸ್ಥಾಪಿಸುವುದಕ್ಕೆ ಹಲವು ಬಾರಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಜಾಗದ ಸಮಸ್ಯೆ ಎದುರಾದ್ರೂ ಜಾಗವನ್ನ ಕೊಡಿಸುವ ಕೆಲಸ ಮಾಡುವುದಾಗಿ ಹೇಳಿದ್ದೇನೆ. ಆದ್ರೂ ಸ್ಟೇಷನ್ ಸ್ಥಾಪನೆಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳ ಮೇಲೆ ಕಿಡಿಕಾರಿದರು.

ಓದಿ:ರಾಜ್ಯದಲ್ಲಿರೋದು ಕಾಂಗ್ರೆಸ್-ಬಿಜೆಪಿ ಮೈತ್ರಿ ಸರ್ಕಾರ: ಡಿಕೆಶಿ ವ್ಯಂಗ್ಯ

14 ವರ್ಷಗಳಲ್ಲಿ ಹಲವು ಸಚಿವರು ಈ ಬಗ್ಗೆ ನಿಮಗೆ ಹೇಳಿದ್ದಾರೆ. ಆದ್ರೂ, ನೀವು ಸ್ಟೇಷನ್ ಸ್ಥಾಪಿಸುತ್ತಿಲ್ಲ. ನೀವು ಮನುಷ್ಯರಾ? ನಿಮಗೆ ನಾಚಿಕೆಯಾಗಲ್ವಾ? ಎಂದು ಆಕ್ರೋಶಗೊಂಡಿದ್ದಾರೆ. ಸಭೆಯಲ್ಲಿ ಉಪಸ್ಥಿತರಿದ್ದ ಡಿಸಿಎಂ ಲಕ್ಷ್ಮಣ್ ಸವದಿ, ಕೂಡಲೇ ಮಂಜೂರಾಗಿರುವ ಸ್ಟೇಷನ್ ಸ್ಥಾಪಿಸಬೇಕು. ಇದಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details