ರಾಯಚೂರು: ನಮ್ಮ ಮಾವ ಮತ್ತು ತಾತನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ರೆ, ನಿಮ್ಮ ಕರ್ಮಕಾಂಡವನ್ನು ಬಯಲು ಮಾಡಬೇಕಾಗುತ್ತದೆ ಎಂದು ಶ್ರೀದೇವಿ ರಾಜಶೇಖರ ನಾಯಕ ಅವರು ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕಗೆ ಎಚ್ಚರಿಸಿದ್ದಾರೆ.
ಬಿಜೆಪಿ ಶಾಸಕನಿಗೆ ಎಚ್ಚರಿಕೆ ನೀಡಿದ ಕೈ ಅಭ್ಯರ್ಥಿಯ ಸಂಬಂಧಿ ಶ್ರೀದೇವಿ - undefined
ನಮ್ಮ ಮಾವ ಹಾಗೂ ತಾತನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ರೆ ಹುಷಾರ್ ಅಂತಾ ಕಾಂಗ್ರೆಸ್ ಅಭ್ಯರ್ಥಿ ಬಿ ವಿ ನಾಯಕ್ ಅವರ ಸಂಬಂಧಿ ಶ್ರೀದೇವಿ ರಾಜಶೇಖರ ನಾಯಕ ಅವರು ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕಗೆ ಎಚ್ಚರಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇವದುರ್ಗ ಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಪರವಾಗಿ ಅವರ ಸಹೋದರನ ಪತ್ನಿ ಶ್ರೀದೇವಿ ರಾಜಶೇಖರ್ ನಾಯಕ ರೋಡ್ ಶೋ ನಡೆಸಿದ್ರು. ಶಾಸಕ ಕೆ. ಶಿವನಗೌಡ ನಾಯಕ ಅವರು ಕಾಂಗ್ರೆಸ್ನವರ ಮನೆಯಲ್ಲಿ, ಕಾಂಗ್ರೆಸ್‌ನವರು ಹಾಕಿದ ರಸ್ತೆಯಲ್ಲಿ ಓಡಾಡಿ ಮತ್ತು ಶಾಲೆಯಲ್ಲಿ ಓದಿ, ಅವರ ಬಗ್ಗೆಯೇ ಏಕವಚನದಲ್ಲಿ ಮಾತನಾಡುತ್ತಿದ್ದಾರೆ ಎಂದು ಶ್ರೀದೇವಿ ಕೆಂಡಾಮಂಡಲವಾದರು.
ಶಿವನಗೌಡ ಏನೆಲ್ಲಾ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಧೈರ್ಯವಿದ್ದರೆ ಎದುರು ಬಂದು ಮಾತನಾಡಲಿ. ತಾತ ಎ. ವೆಂಕಟೇಶ್ ನಾಯಕ, ಮಾವ ಬಿ.ವಿ. ನಾಯಕರಂತೆ ಸುಮ್ಮನೆ ಇರುವುದಿಲ್ಲ. ಇದೇ ರೀತಿ ವರ್ತನೆಯನ್ನು ಮುಂದುವರೆಸಿದ್ರೆ, ನಿಮ್ಮ ಕರ್ಮಕಾಂಡ ಬಯಲು ಮಾಡುತ್ತೇನೆ ಹುಷಾರ್ ಎಂದು ಶ್ರೀದೇವಿ ಗುಡುಗಿದರು.