ಕರ್ನಾಟಕ

karnataka

ETV Bharat / state

ಸಿಡಿಲು ಬಡಿದು ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಐದು ಲಕ್ಷ ರೂ. ನೆರವು ನೀಡಿದ ಶಾಸಕ

ಶಾಸಕ ಡಿ.ಎಸ್. ಹೂಲಗೇರಿ ಅವರು ಸಿಡಿಲು ಬಡಿದು ಸಾವನ್ನಪ್ಪಿದ ವ್ಯಕ್ತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಮೃತನ ಪತ್ನಿ ಆಶಾ ಪವಾರಗೆ 5 ಲಕ್ಷ ರೂ. ಚೆಕ್ ನೀಡಿ, ಹಣವನ್ನು ಮಕ್ಕಳ ಭವಿಷ್ಯಕ್ಕೆ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

mla-holageri
ಶಾಸಕ ಡಿ. ಎಸ್​. ಹೊಲಗೇರಿ

By

Published : Apr 24, 2020, 3:20 PM IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಮಿಂಚೇರಿ ತಾಂಡಾದಲ್ಲಿ ಸಿಡಿಲು ಬಡಿದು ಮೃತಪಟ್ಟ ಸೋಮನಾಥ ಪವಾರ ಕುಟುಂಬಕ್ಕೆ ಶಾಸಕ ಡಿ. ಎಸ್​. ಹೊಲಗೇರಿ ಚೆಕ್ ವಿತರಿಸಿದರು.

ಮೃತನ ಪತ್ನಿ ಆಶಾ ಪವಾರಗೆ 5 ಲಕ್ಷ ರೂ. ಚೆಕ್ ನೀಡಿ, ಹಣವನ್ನು ಮಕ್ಕಳ ಭವಿಷ್ಯಕ್ಕೆ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಸಲಹೆ ನೀಡಿದರು.

ಚೆಕ್​ ವಿತರಿಸಿದ ಶಾಸಕ ಡಿ. ಎಸ್​. ಹೊಲಗೇರಿ

ಕೊರೊನಾ ವೈರಸ್ ಹರಡದಂತೆ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಸ್ವಾಗತಾರ್ಹ. ಸಂಷ್ಟದಲ್ಲಿರುವವರಿಗೆ ದಾನಿಗಳು ನೀಡುವ ಪಡಿತರ ಕಿಟ್ ನೀಡಲಾಗುತ್ತಿದೆ. ತಾವು ಕೂಡ ಲಿಂಗಸುಗೂರಿಗೆ ಹೆಚ್ಚುವರಿ 500 ಕಿಟ್ ನೀಡುವುದಾಗಿ ಶಾಸಕ ಹೊಲಗೇರಿ ತಿಳಿಸಿದರು.

ABOUT THE AUTHOR

...view details