ಕರ್ನಾಟಕ

karnataka

ETV Bharat / state

ರಾಯಚೂರು: ಲಿಂಗಸೂಗೂರು ಶಾಸಕರ ಕಾರಿಗೆ ಲಾರಿ ಡಿಕ್ಕಿ - ಲಿಂಗಸೂಗೂರು ಶಾಸಕ ಡಿ.ಎಸ್.ಹೂಲಗೇರಿ ಕಾರಿಗೆ ಲಾರಿ ಡಿಕ್ಕಿ ಪ್ರಾಣಾಪಯದಿಂದ ಪಾರು

ಲಿಂಗಸೂಗೂರು ತಾಲೂಕಿನ ಮುದಗಲ್ ಹತ್ತಿರದ ಕನಾಸವಿ ಕ್ರಾಸ್ ಬಳಿ, ಶಾಸಕ ಡಿ.ಎಸ್. ಹೂಲಗೇರಿ ಚಲಿಸುತ್ತಿದ್ದ ಕಾರು ಅಪಘಾತವಾಗಿದ್ದು, ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಿಂಗಸೂಗೂರು ಶಾಸಕರ ಕಾರಿಗೆ ಲಾರಿ ಡಿಕ್ಕಿ
ಲಿಂಗಸೂಗೂರು ಶಾಸಕರ ಕಾರಿಗೆ ಲಾರಿ ಡಿಕ್ಕಿ

By

Published : Feb 24, 2022, 7:16 PM IST

ರಾಯಚೂರು : ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ಎಸ್.ಹೂಲಗೇರಿ ಚಲಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್​ ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಹತ್ತಿರದ ಕನಾಸವಿ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ. ಇಳಕಲ್ ನಿಂದ ಲಿಂಗಸೂಗೂರು ಕಡೆ ಬರುವಾಗ ಕನಾಸವಿ ಕ್ರಾಸ್​​​​ನ ತಿರುವಿನಲ್ಲಿ ಲಾರಿ ಕಾರ್​ಗೆ ಡಿಕ್ಕಿ ಹೊಡೆದಿದೆ‌.

ಶಾಸಕರು ಕುಳಿತುಕೊಂಡಿದ್ದ ಡೋರ್​​​ಗೆ ಲಾರಿ ಡಿಕ್ಕಿ ಹೊಡೆದಿದ್ದು, ಶಾಸಕ ಹೂಲಗೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುದಗಲ್ ಠಾಣೆ ವ್ಯಾಪ್ತಿಯಲ್ಲಿ ‌ಈ ಘಟನೆ ನಡೆದಿದೆ.

For All Latest Updates

TAGGED:

ABOUT THE AUTHOR

...view details