ಲಿಂಗಸುಗೂರು (ರಾಯಚೂರು) :ಶಾಸಕ ಡಿ ಎಸ್ ಹೂಲಗೇರಿಗೆ ಕೊರೊನಾ ದೃಢವಾಗಿದೆ. ಕೆಲ ದಿನಗಳಿಂದ ಕೆಲಸ ಕಾರ್ಯಗಳಿಗೆ ಬಂದ ಕಾರ್ಯಕರ್ತರು ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.
ಲಿಂಗಸುಗೂರು : ಶಾಸಕ ಡಿ ಎಸ್ ಹೊಲಗೇರಿಗೆ ಕೊರೊನಾ ಪಾಸಿಟಿವ್ - Raichur Corona case'
ಕೋವಿಡ್ ದೃಢಪಟ್ಟಿದ್ದರಿಂದ ಎರಡು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಶಾಸಕರು ಗುಣಮುಖರಾಗುತ್ತಿದ್ದು, ಆತಂಕಪಡುವ ಅಗತ್ಯವಿಲ್ಲ..
ಲಿಂಗಸುಗೂರು: ಶಾಸಕ ಡಿಎಸ್ ಹೊಲಗೇರಿಗೆ ಕೊರೊನಾ ಪಾಸಿಟಿವ್
ಕೋವಿಡ್ ದೃಢಪಟ್ಟಿದ್ದರಿಂದ ಎರಡು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಶಾಸಕರು ಗುಣಮುಖರಾಗುತ್ತಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಅವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.
ಈ ಕುರಿತು ಈಟಿವಿ ಭಾರತ ಸಂಪರ್ಕಿಸಿದಾಗ, ಕೋವಿಡ್ ದೃಢಪಟ್ಟಿದ್ದು ನಿಜ. ಚೇತರಿಸಿಕೊಳ್ಳುತ್ತಿದ್ದು, ಕಾರ್ಯಕರ್ತರು ಭಯಪಡುವ ಅಗತ್ಯವಿಲ್ಲ. ಆದಷ್ಟು ಕ್ಷೇತ್ರದ ಜನತೆ ಕೊರೊನಾ ವೈರಸ್ ಹರಡದಂತೆ ಎಚ್ಚರಿಕೆವಹಿಸಲು ಮನವಿ ಮಾಡಿದರು.