ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ದೇವರಭೂಪುರ ವೃದ್ಧ ಮಲ್ಲಪ್ಪ ಗುರುಗುಂಟಿ ಎಂಬುವವರು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ವಾಂತಿ-ಭೇದಿ ಪ್ರಕರಣ: ದೇವರಭೂಪುರ ರೋಗಿಗಳ ಆರೋಗ್ಯ ವಿಚಾರಿಸಿದ ಶಾಸಕ - ಶಾಸಕ ಡಿ.ಎಸ್. ಹೂಲಗೇರಿ
ಶಾಸಕ ಡಿ.ಎಸ್.ಹೂಲಗೇರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಾಂತಿ, ಭೇದಿಯಿಂದ ಚಿಕಿತ್ಸೆಗೆ ದಾಖಲಾದ ದೇವರಭೂಪುರದ ರೋಗಿಗಳ ಆರೋಗ್ಯ ವಿಚಾರಣೆ ನಡೆಸಿದ್ದಾರೆ.
ಡಿ.ಎಸ್. ಹೂಲಗೇರಿ
ಇಂದು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಾಂತಿ, ಭೇದಿಯಿಂದ ಚಿಕಿತ್ಸೆಗೆ ದಾಖಲಾದ ದೇವರಭೂಪುರದ ರೋಗಿಗಳ ಆರೋಗ್ಯ ವಿಚಾರಿಸಿ ನಂತರ ಮಾತನಾಡಿದ ಅವರು, ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ ಎಂದರು.
ಅಲ್ಲದೇ ಗ್ರಾಮದಲ್ಲಿ ಸ್ವಚ್ಛತೆ, ಆರೋಗ್ಯ ಮುಂಜಾಗ್ರತೆ ಮತ್ತು ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನು ಆಸ್ಪತ್ರೆಯಲ್ಲಿರುವ ಎಲ್ಲಾ ರೋಗಿಗಳಿಗೂ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿರುವುದಾಗಿ ಹೇಳಿದರು.