ಕರ್ನಾಟಕ

karnataka

ETV Bharat / state

ಉಕ್ಕಿ ಹರಿಯುತ್ತಿರುವ ಕೃಷ್ಣ ನದಿಗೆ ಬಸವನಗೌಡ ದದ್ದಲ್​ರಿಂದ ಪೂಜೆ, ಪರಿಶೀಲನೆ

ಕಳೆದ ಕೆಲ ದಿನಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಗ್ರಾಮೀಣ ಶಾಸಕ ಬಸವನ ಗೌಡ ದದ್ದಲ್ ಅವರು ಕೃಷ್ಣ ನದಿಗೆ ವಿಶೇಷ ಗಂಗೆ ಪೂಜೆ ಸಲ್ಲಿಸಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು.

By

Published : Aug 4, 2019, 5:48 PM IST

raichur district

ರಾಯಚೂರು:ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರು ಕೃಷ್ಣ ನದಿಗೆ ವಿಶೇಷ ಗಂಗೆ ಪೂಜೆ ಸಲ್ಲಿಸಿದರು.

ಜಿಲ್ಲೆಗೆ ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು

ತಾಲೂಕಿನ, ಅತ್ಕೂರು ಹಾಗೂ ಕುರುವಕುಲ ಗ್ರಾಮಗಳಿಗೆ ಬಳಿ ಭೇಟಿ ನೀಡಿದ ಶಾಸಕರು ಕೃಷ್ಣ ನದಿಗೆ ಪೂಜೆ ನೇರವೇರಿಸಿ ಬಳಿಕ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ಕುರವಕಲ, ಕುರವರ್ಧ ಹಾಗೂ ದತ್ತಪೀಠಕ್ಕೆ ತೆರಳುವ ಭಕ್ತರಿಗೆ ತೊಂದರೆ ಉಂಟಾಗುತ್ತದೆ. ಇದಕ್ಕಾಗಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಆದ್ರೆ ಕಾಮಗಾರಿ ಅಪೂರ್ಣಗೊಂಡಿದ್ದು, ನಡುಗಡ್ಡೆ ಪ್ರದೇಶದಲ್ಲಿ ವಾಸಿಸುವ ಜನರು ದತ್ತಪೀಠಕ್ಕೆ ತೆರಳುವ ಜನರು ತೆಪ್ಪದಲ್ಲಿ ನದಿಯ ಜೀವಭಯದ ಓಡಾಡುವಂತಹ ಪರಿಸ್ಥಿತಿಯಿದೆ ಎದುರಾಗಿದೆ ಎಂದರು.

ಸೇತುವೆಗೆ ನಿರ್ಮಾಣಕ್ಕೆ ಹಣವಿದೆ. ಆದರೂ ಕಾಮಗಾರಿ ವಿಳಂಬವಾಗುತ್ತದೆ. ಇದರ ಬಗ್ಗೆ ಸರ್ಕಾರವನ್ನು ಕೇಳೋಣವೆಂದರೆ ಮಂತ್ರಿಯೇ ಇಲ್ಲ. ಮಂತ್ರಿಮಂಡಲ ರಚನೆಯಾಗಿದ್ರೆ ಕಂದಾಯ ಸಚಿವರನ್ನು ಕೇಳಬಹುದಿತ್ತು. ಈಗ ಜಿಲ್ಲೆಗೆ ಹಾನಿಯಾಗಿದೆ. ಅದನ್ನ ಯಾರು ಕೇಳಬೇಕು ಕೂಡಲೇ ಸಚಿವ ಸಂಪುಟ ರಚನೆ ಮಾಡುವಂತೆ ಒತ್ತಾಯಿಸಿದ್ರು.

ABOUT THE AUTHOR

...view details