ರಾಯಚೂರು:ಸಿಡಿಲು ಬಡಿದು ಮೃತಪಟ್ಟ ಇಬ್ಬರು ಸಹೋದರರ ಕುಟುಂಬಕ್ಕೆ ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಹತ್ತು ಲಕ್ಷ ಪರಿಹಾರದ ಚೆಕ್ ನೀಡಿದರು.
ಸಿಡಿಲು ಬಡಿದು ಮೃತಪಟ್ಟ ಸಹೋದರರ ಕುಟುಂಬಕ್ಕೆ ಶಾಸಕ ಬಸವನಗೌಡ ದದ್ದಲ್ ಸಹಾಯ - Raichur latest news
ರಾಯಚೂರು ತಾಲೂಕಿನ ಸಿಂಗನೋಡಿ ಗ್ರಾಮದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದ ಸಹೋದರರ ಕುಟುಂಬಕ್ಕೆ ಶಾಸಕ ಬಸವನಗೌಡ ದದ್ದಲ್ ಹತ್ತು ಲಕ್ಷ ರೂ. ಪರಿಹಾರದ ಚೆಕ್ ನೀಡಿದರು.
ರಾಯಚೂರು
ತಾಲೂಕಿನ ಸಿಂಗನೋಡಿ ಗ್ರಾಮದಲ್ಲಿ ಜು.24 ರಂದು ಸಿಡಿಲು ಬಡಿದು ಒಂದೇ ಕುಟುಂಬದ ರವಿಚಂದ್ರ, ವಿಷ್ಣು ಎಂಬ ಇಬ್ಬರು ಅಣ್ಣ-ತಮ್ಮಂದಿರು ಸ್ಥಳದಲ್ಲೇ ಮೃತಪಟ್ಟಿದ್ದರು.
ಇಂದು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಬಸವನಗೌಡ ದದ್ದಲ್, ಅವರ ಮನೆಗೆ ತೆರಳಿ ವಿಪತ್ತು ಪರಿಹಾರ ನಿಧಿಯಡಿ ತಲಾ ಒಬ್ಬರಿಗೆ 5 ಲಕ್ಷ ರೂಪಾಯಿಯಂತೆ ಇಬ್ಬರಿಗೆ 10 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.