ರಾಯಚೂರು: ಕಳೆದ 15 ದಿನಗಳಿಂದ ಕಾಣೆಯಾದ ಯುವಕ ಶವವಾಗಿ ತೆಲಂಗಾಣದಲ್ಲಿ ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಾಣೆಯಾದ ಯುವಕ ತೆಲಂಗಾಣದಲ್ಲಿ ಶವವಾಗಿ ಪತ್ತೆ! - Raichur latest crime news
ಕಾಣೆಯಾದ ಯುವಕ ಶವವಾಗಿ ತೆಲಂಗಾಣದಲ್ಲಿ ಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಅರಸಿಗೇರಾ ಗ್ರಾಮದ ನಿವಾಸಿ ವೀರೇಂದ್ರ ಯಾದವ್(27) ಶವವಾಗಿ ಪತ್ತೆಯಾಗಿರುವ ಯುವಕ. ತೆಲಂಗಾಣದ ಮಲಿಯಾಗಡ್ಡದ ಗ್ರಾಮದ ಬಳಿಕ ಕಾಲುವೆ ಬಳಿ ಈ ಯುವಕ ಶವ ಪತ್ತೆಯಾಗಿದ್ದಾನೆ. ಕಳೆದ ಸುಮಾರು 15 ದಿನಗಳ ತನ್ನ ಮಗ ಕಾಣೆಯಾಗಿದ್ದಾನೆ ಎಂದು ತಾಯಿ ಮಾರೆಮ್ಮ ಕೃಷ್ಣಪ್ಪ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾಣೆಯಾದ ಯುವಕನಿಗೆ ಶೋಧ ನಡೆಯುವ ಮಧ್ಯೆ ಸಂಶಯಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸದ್ಯ ತೆಲಂಗಾಣದ ಗದ್ವಾಲ್ ಜಿಲ್ಲೆಯ ಕೆ.ಟಿ.ದೊಡ್ಡಿಯಲ್ಲಿ ಪ್ರಕರಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವೀರೇಂದ್ರ ಯಾದವ್ ರಾಯಚೂರು ಬಿಜೆಪಿ ಯುವ ಮುಖಂಡ ಎಂದು ಹೇಳಲಾಗುತ್ತಿದೆ.