ರಾಯಚೂರು:ಆಗಸ್ಟ್ 16 ರಂದು ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಗುಡೂರು ಬಳಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ.
ಆಗಸ್ಟ್ 16 ರಂದು ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿ, ಆಂಧ್ರಪ್ರದೇಶದಲ್ಲಿ ಶವವಾಗಿ ಪತ್ತೆ - raichur latest news
ಆಗಸ್ಟ್ 16 ರಂದು ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಗುಡೂರು ಬಳಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ.
![ಆಗಸ್ಟ್ 16 ರಂದು ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿ, ಆಂಧ್ರಪ್ರದೇಶದಲ್ಲಿ ಶವವಾಗಿ ಪತ್ತೆ](https://etvbharatimages.akamaized.net/etvbharat/prod-images/768-512-4201757-thumbnail-3x2-sow---copy.jpg)
ಆಗಸ್ಟ್ 16 ರಂದು ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿ..ಆಂಧ್ರಪ್ರದೇಶದಲ್ಲಿ ಶವವಾಗಿ ಪತ್ತೆ..!
ಆಗಸ್ಟ್ 16 ರಂದು ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿ..ಆಂಧ್ರಪ್ರದೇಶದಲ್ಲಿ ಶವವಾಗಿ ಪತ್ತೆ..!
ರಾಯಚೂರು ತಾಲೂಕಿನ ಗಣಮೂರು ಗ್ರಾಮದ 17 ವರ್ಷದ ಬಾಲಕಿ ಆಗಸ್ಟ್ 16 ರಂದು ಕಾಲೇಜಿಗೆ ಹೋಗಿದ್ದು, ಸಂಜೆ ರಾಯಚೂರು ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದಳು. ಬಾಲಕಿಯ ತಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪಹರಣ ಮಾಡಿರುವುದಾಗಿ ದೂರು ದಾಖಲಿಸಿದ್ದರು. ಪ್ರಕರಣ ತನಿಖೆ ವೇಳೆ ಬಾಲಕಿಯ ಶವ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಗುಡೂರು ಬಳಿ ಪತ್ತೆಯಾಗಿದೆ. ಬಾಲಕಿಯ ಶವವನ್ನು ಸ್ವಗ್ರಾಮಕ್ಕೆ ಕರೆ ತರಲಾಗುತ್ತಿದ್ದು, ಮಗಳನ್ನು ಕಳೆದುಕೊಂಡು ಪೊಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮಗಳು ಕಾಣೆಯಾಗಿದ್ದಾಳೆಂದು ಪೋಷಕರ ದೂರು ನೀಡಿರುವ ಹಿನ್ನೆಲೆ, ವೀರೇಂದ್ರ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.