ಕರ್ನಾಟಕ

karnataka

ETV Bharat / state

ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ! - ರಾಯಚೂರು ಸುದ್ದಿ,

Missing ex mla grandsons found dead, Missing ex mla grandsons found dead in Raichur, Raichur news, Raichur crime news, ನಾಪತ್ತೆಯಾಗಿದ್ದ ಮಾಜಿ ಶಾಸಕನ ಮೊಮ್ಮಕ್ಕಳು ಶವವಾಗಿ ಪತ್ತೆ, ರಾಯಚೂರಿನಲ್ಲಿ ನಾಪತ್ತೆಯಾಗಿದ್ದ ಮಾಜಿ ಶಾಸಕನ ಮೊಮ್ಮಕ್ಕಳು ಶವವಾಗಿ ಪತ್ತೆ, ರಾಯಚೂರು ಸುದ್ದಿ, ರಾಯಚೂರು ಅಪರಾಧ ಸುದ್ದಿ,
ಮಾಜಿ ಶಾಸಕ ಮೊಮ್ಮಕ್ಕಳು ಶವವಾಗಿ ಪತ್ತೆ

By

Published : Mar 8, 2021, 10:46 AM IST

Updated : Mar 8, 2021, 11:18 AM IST

10:35 March 08

ನಿನ್ನೆ ನಾಪತ್ತೆಯಾಗಿದ್ದ ಮಾಜಿ ಶಾಸಕರೊಬ್ಬರ ಮೊಮ್ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಮಾಜಿ ಶಾಸಕ ಮೊಮ್ಮಕ್ಕಳು ಶವವಾಗಿ ಪತ್ತೆ

ರಾಯಚೂರು:ಮಾನವಿ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಅವರ ಕಾಣೆಯಾಗಿದ್ದ ಮೊಮ್ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. 

ಜಿಲ್ಲೆಯ ಬಲ್ಲಟಗಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಮಕ್ಕಳಿಬ್ಬರ ಶವ ಪತ್ತೆಯಾಗಿವೆ. ವರುಣ(9), ಸಣ್ಣಯ್ಯ(5) ಮೃತಪಟ್ಟ ಬಾಲಕರಾಗಿದ್ದಾರೆ. 

ನಿನ್ನೆ ಮಧ್ಯಾಹ್ನದ ವೇಳೆ ಮಕ್ಕಳಿಬ್ಬರು ಮನೆಯ ಮುಂದೆ ಆಟವಾಡುತ್ತಿದ್ದರು. ಆದ್ರೆ ಏಕಾಏಕಿ ಮಕ್ಕಳಿಬ್ಬರು ಮನೆಯ ಮುಂದೆ ಇರಲಿಲ್ಲ. ಹೀಗಾಗಿ ಗ್ರಾಮದಲ್ಲಿ ಎಲ್ಲೆ ಕಡೆ ಹುಡಕಾಟ ನಡೆಸಿದ್ದರೂ ಬಾಲಕರಿಬ್ಬರು ಪತ್ತೆಯಾಗಿರಲಿಲ್ಲ. 

ಇದೀಗ ಮಕ್ಕಳಿಬ್ಬರ ಮೃತ ದೇಹಗಳು ಹಳ್ಳದಲ್ಲಿ ಪತ್ತೆಯಾಗಿವೆ. ಘಟನೆಯಿಂದ ಗ್ರಾಮದಲ್ಲಿ ಮೌನ ಆವರಿಸಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

ಈ ಘಟನೆ ಸಿರವಾರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

Last Updated : Mar 8, 2021, 11:18 AM IST

ABOUT THE AUTHOR

...view details