ಕರ್ನಾಟಕ

karnataka

ETV Bharat / state

ಕೆರೆಗೆ ವಿಷ ಹಾಕಿ ಮೀನುಗಳ ಮಾರಣಹೋಮ: ಇಬ್ಬರು ಆರೋಪಿಗಳ ಬಂಧನ - ರಾಯಚೂರು ಲೇಟಸ್ಟ್​ ಕ್ರೈಂ ನ್ಯೂಸ್​

ಕಟ್ಲಟ್ಕೂರು ಗ್ರಾಮದ ಕೆರೆಯಲ್ಲಿ ವಿಷ ಹಾಕಿ ಮೀನುಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

miscreants who poisoned the lake
ಕೆರೆಗೆ ವಿಷ ಹಾಕಿ ಮೀನುಗಳ ಸಾವು..

By

Published : Oct 13, 2020, 3:29 PM IST

ರಾಯಚೂರು: ತಾಲೂಕಿನ ಕಟ್ಲಟ್ಕೂರು ಗ್ರಾಮದ ಕೆರೆಯಲ್ಲಿ ವಿಷ ಹಾಕಿ ಮೀನುಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೆರೆಯಲ್ಲಿ ವಿಷ ಸೇವಿಸಿ ಸಾವಿಗೀಡಾದ ಮೀನುಗಳು

ಜಂಗ್ಲಪ್ಪ, ಕೊಂಡಪ್ಪ ಬಂಧಿತ ಆರೋಪಿಗಳು. ಕಟ್ಲಟ್ಕೂರು ಗ್ರಾಮದ 300 ಹೆಚ್ಚು ಎಕರೆ ಪ್ರದೇಶದಲ್ಲಿರುವ ಕೆರೆಯಲ್ಲಿ ಮೀನುಗಾರರು ಮೀನು ಸಾಕಾಣಿಕೆ ಮಾಡಿದ್ದರು. ಆದ್ರೆ ಕಿಡಿಗೇಡಿಗಳು ಕೆರೆಯಲ್ಲಿ ವಿಷ ಬೆರೆಸಿದ ಪರಿಣಾಮ ಅಪಾರ ಪ್ರಮಾಣದ ಮೀನುಗಳು ಮೃತಪಟ್ಟಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಜಳ್ಳಿ ಗಂಗಾಮತ ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ನರಸಪ್ಪ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details