ರಾಯಚೂರು :ಅಲ್ಪಸಂಖ್ಯಾತರ ನಿಗಮ ಮಂಡಳಿಯಲ್ಲಿ ಬಾಕಿಯಿರುವ ಅರ್ಜಿಗಳನ್ನು ಇತ್ಯರ್ಥಪಡಿಸಿ 188 ಕೋಟಿ ರೂ. ಬಿಡುಗಡೆಗೊಳಿಸಿದ್ದು, ನಮ್ಮ ಸರ್ಕಾರ ಅಲ್ಪ ಸಂಖ್ಯಾತರಿಗೆ ನೀಡಬೇಕಾದ ಸೌಲಭ್ಯಗಳನ್ನ ನೀಡಲು ಬದ್ಧವಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತ ನಿಗಮ ಮಂಡಳಿ ಅಧ್ಯಕ್ಷ ಮುಖ್ತಾರ್ ಪಠಾಣ್ ಹೇಳಿದರು.
ಅಲ್ಪಸಂಖ್ಯಾತ ನಿಗಮ ಮಂಡಳಿಯಿಂದ 188 ಕೋಟಿ ರೂ. ಬಿಡುಗಡೆ: ಮುಖ್ತಾರ್ ಪಠಾಣ್ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ನಿಗಮ ಮಂಡಳಿಯಲ್ಲಿ 2019-20ನೇ ಸಾಲಿನಲ್ಲಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ಇತ್ಯರ್ಥಪಡಿಸಿ 188 ಕೋಟಿ ರೂ. ಬಿಡಗಡೆ ಮಾಡಲಾಗಿದೆ. ಸಿಇಟಿ, ಎನ್ಇಟಿ ಪರೀಕ್ಷೆಗಳಲ್ಲಿ ಪಾಸಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ₹30 ಸಾವಿರದಿಂದ ₹2 ಲಕ್ಷದ ವರೆಗೂ ನೀಡಲಾಗುವುದು.
ರಾಜ್ಯದಲ್ಲಿ ಕೊಳಚೆ ನಿರ್ಮೂಲನೆ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ ಮನೆಯ ಫಲಾನುಭವಿಗಳಲ್ಲಿ ಅಲ್ಪಸಂಖ್ಯಾತರಿದ್ರೆ, ಅವರಿಗೆ 1 ಲಕ್ಷ ರೂ. ವಂತಿಗೆ ಹಣ ನಿಗಮ ಮಂಡಳಿ ಪಾವತಿಸಲಿದೆ. ಕೊಳಚೆ ನಿರ್ಮೂಲನೆ ಮಂಡಳಿಗೆ ಈವರೆಗೆ 10 ಕೋಟಿ ರೂ. ಪಾವತಿಸಲಾಗಿದೆ ಎಂದರು.
ಕೋವಿಡ್ ಹಾಗೂ ಪ್ರವಾಹದ ಹಿನ್ನೆಲೆ, ರಾಜ್ಯ ಸರ್ಕಾರ ಪರಿಹಾರದ ಕ್ರಮಗಳನ್ನು ಕೈಗೊಂಡಿದ್ದು, ನಮ್ಮ ನಿಗಮ ಮಂಡಳಿಯಿಂದ ಮೈಕ್ರೋ ಯೋಜನೆಯಲ್ಲಿ ಬೀದಿ ಬದಿಯ ಮಹಿಳಾ ವ್ಯಾಪಾರಿಗಳಿಗೆ ಹತ್ತು ಸಾವಿರ ರೂ. ಸಾಲ ನೀಡಲು ನಿರ್ಧರಿಸಿದೆ. ಇದರಲ್ಲಿ ಶೇ.20ರಷ್ಟು ರಿಯಾಯಿತಿ ಇರಲಿದ್ದು, ಸುಮಾರು 23 ಸಾವಿರ ಅರ್ಜಿಗಳು ಬಂದಿವೆ. ಶೀಘ್ರವೇ ಹಣ ಬಿಡುಗಡೆ ಮಾಡಲಾಗುವುದು ಎಂದರು.