ರಾಯಚೂರು: ಮಹಾಪೌರರಾದವರೇ ಕಣ್ಮರೆಯಾಗುವುದು ಬಹಳ ನೋವಿನ ಸಂಗತಿ ಹೀಗಾಗಬಾರದಿತ್ತು ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಇವತ್ತು ಅವರ ಬಂಧನವಾಗಿದೆ. ಅವರು ತಲೆ ಮಾರಿಸಿಕೊಂಡ ತಿರುಗಾಡಬಾರದಿತ್ತು, ಈ ರೀತಿಯಾಗಿ ನಡೆದುಕೊಳ್ಳಬಾರದಿತ್ತು. ಅವರ ಬಂಧನದಿಂದ ಪೊಲೀಸರ ದಕ್ಷತೆ ಎದ್ದು ಕಾಣುತ್ತಿದೆ ಎಂದಿದ್ದಾರೆ.
ಇನ್ನು ಸಚಿವ ಸಂಪುಟ ಕುರಿತು ಪ್ರತಿಕ್ರಿಯಿಸಿ,ಶಾಸಕರಾದ ಡಾ.ಶಿವರಾಜ್ ಪಾಟೀಲ್, ಕೆ.ಶಿವನಗೌಡ ನಾಯಕ ಇಬ್ಬರೂ ಸಹ ಮಂತ್ರಿಗಳಾಗಲು ಅರ್ಹರಿದ್ದಾರೆ. ಇದನ್ನು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.