ರಾಯಚೂರು:ಬಸವರಾಜ ಬೊಮ್ಮಾಯಿಯವರು ಬುದ್ದಿವಂತ ಸಿಎಂ. ಅವರು ಸಮರ್ಥವಾಗಿ ಸರ್ಕಾರವನ್ನು ಮುನ್ನಡೆಸುವ ವಿಶ್ವಾಸವಿದೆ. ಖಾತೆ ಹಂಚಿಕೆಯ ಅಸಮಾಧಾನದ ವಿಷಯವನ್ನು ಅವರು ಸರಿಪಡಿಸಿಕೊಳ್ಳುತ್ತಾರೆ. ಒಂದು ವೇಳೆ ನಮ್ಮ ಅವಶ್ಯಕತೆ ಇದ್ದರೆ ನಾನು ಹೋಗಿ ಸಲಹೆ, ಸೂಚನೆಗಳನ್ನು ನೀಡುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನನಗೆ ನೀಡಿದ ಖಾತೆಯ ಬಗ್ಗೆ ತೃಪ್ತಿ ಇದೆ. ನಾನು ಬಂಧಿಖಾನೆ ಸಚಿವನಾಗಿ ಮೊದಲು ಮಂತ್ರಿಯಾದೆ. ಬಳಿಕ ಪ್ರೊಮೋಷನ್ ಆಗಿ ಬೆಂಗಳೂರು ನಗರಾಭಿವೃದ್ಧಿ, ಆ ಮೇಲೆ ರಾಜ್ಯದ ಸಾರ್ವಜನಿಕ ಕುಂದುಕೊರತೆಗೆ ಸಚಿವನಾಗಿದ್ದೆ. ಹಾಗಾಗಿ, ಸೋಮಣ್ಣ ನಿಂತ ನೀರಲ್ಲ, ಹರಿಯುವ ನೀರು ಇದ್ದ ಹಾಗೆ. ನಾನು ಎಲ್ಲೇ ಇದ್ರೂ ನನ್ನ ಸ್ಟೈಲ್‌ನಲ್ಲೇ ಕೆಲಸ ಮಾಡುತ್ತೇನೆ, ನನಗೆ ಬೇರೆ ಯಾವುದೇ ಆಸೆಗಳಿಲ್ಲ ಎಂದರು.