ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯಗೆ ಅಹಿಂದ, ಹಿಂದುಳಿದ ನಾಯಕ ಎಂದು ಕರೆಸಿಕೊಳ್ಳುವ ಅರ್ಹತೆ ಇಲ್ಲ : ಶ್ರೀರಾಮುಲು - ಸಿದ್ದರಾಮಯ್ಯ ಆಯೋಗವನ್ನು ರಚನೆ ಮಾಡಲಿಲ್ಲ

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಹಿಂದ, ಹಿಂದುಳಿದ ನಾಯಕ ಎಂದು ಕರೆಸಿಕೊಳ್ಳುವ ಅರ್ಹತೆ ಇಲ್ಲ. ಹಿಂದುಳಿದ ವರ್ಗದ ಬಗ್ಗೆ ಕಳಕಳಿಯೂ ಇಲ್ಲ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

minister-shriramulu-spoke-against-siddaramaiah
ಸಿದ್ದರಾಮಯ್ಯಗೆ ಅಹಿಂದ, ಹಿಂದುಳಿದ ನಾಯಕ ಎಂದು ಕರೆಸಿಕೊಳ್ಳುವ ಅರ್ಹತೆ ಇಲ್ಲ : ಶ್ರೀರಾಮುಲು

By

Published : Oct 31, 2022, 11:01 PM IST

ರಾಯಚೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದ ಹಿಂದುಳಿದ ವರ್ಗದ ಜನರು ಸಿದ್ದರಾಮಯ್ಯ ಅವರಿಂದ ರೋಸಿ ಹೋಗಿದ್ದಾರೆ. ಎಸ್‌ಸಿ, ಎಸ್ ಟಿ ಜನಾಂಗದವರು ಅವರನ್ನು ನಂಬುವುದಿಲ್ಲ. ಜನ ಮುಂದಿನ ಚುನಾವಣೆಯಲ್ಲಿ ಅವರನ್ನು ತಿರಸ್ಕಾರ ಮಾಡುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯನವರಿಗೆ ಅಹಿಂದ, ಹಿಂದುಳಿದ ನಾಯಕ ಎಂಬುದು ಐದು ವರ್ಷಕ್ಕೊಮ್ಮೆ ನೆನಪಿಗೆ ಬರುತ್ತದೆ. ಇಂದು ಕೆಳ ಸಮುದಾಯದವರಿಗೆ ಮೀಸಲಾತಿ ಕೊಡುವ ವಿಚಾರದಲ್ಲಿ ಅವರು ಸೋತಿದ್ದಾರೆ. ಅವರ ಪ್ರಿನ್ಸಿಪಾಲ್ ಸೆಕ್ರೆಟರಿ ಜಾಧವ್ ಅವರು ವರದಿ ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಆಯೋಗವನ್ನು ರಚನೆ ಮಾಡಲಿಲ್ಲ. ಮೀಸಲಾತಿ ವಿಚಾರದಲ್ಲಿ ಆಯೋಗ ಮಾಡಲಿಲ್ಲ. ಎಸ್ ಎಸಿ ಎಸ್ ಟಿಗೆ ಮೀಸಲಾತಿ ಹೆಚ್ಚಿಸುವ ಕೆಲಸ ನಮ್ಮ ಸಿಎಂ ಮಾಡಿದ್ದಾರೆ ಎಂದು ಹೇಳಿದರು.

ಇನ್ನು ಸಿದ್ದರಾಮಯ್ಯ ಅವರಿಗೆ ಹಿಂದುಳಿದವರ, ಅಹಿಂದ ನಾಯಕರು ಎಂದು ಕರೆಸಿಕೊಳ್ಳುವ ಅರ್ಹತೆ ಇಲ್ಲ. ಹಿಂದುಳಿದ ಜನಾಂಗದವರ ಬಗ್ಗೆಯೂ ಕಳಕಳಿ ಇಲ್ಲ. ಅದು ಏನಿದ್ದರೂ ಬಸವರಾಜ್ ಬೊಮ್ಮಾಯಿಯವರು ಮಾತ್ರ. ಹೀಗಾಗಿ ಸಿಎಂ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಲು ಬಳ್ಳಾರಿಯಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ :ರಸ್ತೆ ಗುಂಡಿಗೆ ಮತ್ತೆರಡು ಬಲಿ: ಪ್ರತಿಭಟನೆ ನಡೆಸಿದ ಆಪ್​ ಮುಖಂಡರು ಪೊಲೀಸ್‌ ವಶಕ್ಕೆ

ABOUT THE AUTHOR

...view details