ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ರಾಜ್ಯದಲ್ಲಿ ತಾಲಿಬಾನ್ ಪರಿಸ್ಥಿತಿ ಇರುತ್ತಿತ್ತು : ಸಚಿವ ಶ್ರೀರಾಮುಲು - ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ವಾಗ್ದಾಳಿ

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಹೈಕಮಾಂಡ್​ ಟಾರ್ಗೆಟ್ ಮಾಡಿದೆಯಾ ಎಂಬ ಪ್ರಶ್ನೆಗೆ‌‌ ಪ್ರತಿಕ್ರಿಯಿಸಿ, ಹಾಗಾದ್ರೆ IT ದಾಳಿ ಮಾಡೋದು ತಪ್ಪಾ? ನೀವು ಟಾರ್ಗೆಟ್ ಎಂದು ಬಿಂಬಿಸಿದ್ರೆ IT ದಾಳಿ ಮಾಡೋದೇ ತಪ್ಪು ಅನ್ನೋ ಹಾಗಾಗುತ್ತದೆ. ಕಾನೂನು ಪ್ರಕಾರ ಅದು ಅದರ ಕೆಲಸ ಮಾಡ್ತಿದೆ. ಇಲ್ಲಿ ಯಾರದ್ದು ತಪ್ಪು ಅಂತೈ ನಾನು ಹೇಳಲ್ಲ..

minister shriramulu
ಸಚಿವ ಶ್ರೀರಾಮುಲು

By

Published : Oct 8, 2021, 7:32 PM IST

ರಾಯಚೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಅಫ್ಘಾನಿಸ್ತಾನದಲ್ಲಿರುವ ಹಾಗೆ ತಾಲಿಬಾನ್ ಪರಿಸ್ಥಿತಿ ಇರುತ್ತಿತ್ತು ಎಂದು ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿರುವುದು..

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಹೆಚ್ ಡಿ ಕುಮಾರಸ್ವಾಮಿ ಆರ್​​ಎಸ್‌ಎಸ್ ಕುರಿತಂತೆ ಹೇಳಿಕೆ ಕೊಡ್ತಾರೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಆರ್‌ಎಸ್‌ಎಸ್ ಸಂಸ್ಕೃತಿ ಗೊತ್ತಿಲ್ಲ. ಆರ್‌ಎಸ್‌ಎಸ್ ನಮ್ಮ ಭಾರತ ದೇಶದಲ್ಲಿ ಎಲ್ಲ ಧರ್ಮದವರನ್ನು ಅಭಿಮಾನ, ಪ್ರೀತಿಯಿಂದ ನೋಡ್ತಿದೆ. ದೇಶ ಕಟ್ಟುವ ಕೆಲಸ ಮಾಡ್ತಿದೆ ಎಂದರು.

ತಾಲಿಬಾನ್​​​ನಲ್ಲಿರುವ ಪರಿಸ್ಥಿತಿ ಕರ್ನಾಟಕದಲ್ಲಿರುತ್ತಿತ್ತೇನೋ :ಸಿದ್ದರಾಮಯ್ಯ ಆರ್‌ಎಸ್‌ಎಸ್‌ ಸಂಸ್ಕೃತಿ ತಾಲಿಬಾನಿ ಸಂಸ್ಕೃತಿ ಅಂತಾರೆ. ಆದ್ರೆ, ಕಾಂಗ್ರೆಸ್ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ರೆ, ತಾಲಿಬಾನ್​​​ನಲ್ಲಿರುವ ಪರಿಸ್ಥಿತಿ ಕರ್ನಾಟಕದಲ್ಲಿರುತ್ತಿತ್ತು. ಆರ್‌ಎಸ್‌ಎಸ್‌ ಇದೆ ಅನ್ನೋ ಕಾರಣಕ್ಕೆ ನಮ್ಮ ರಾಜ್ಯ, ನಮ್ಮ ದೇಶ ಸುರಕ್ಷಿತವಾಗಿದೆ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು ಎಂದರು.

ಐಟಿ ದಾಳಿ ಕುರಿತು ಪ್ರತಿಕ್ರಿಯೆ :ಐಟಿ ದಾಳಿ ಇವತ್ತು ಇವರ ಮೇಲೆ ಆದ್ರೆ, ನಾಳೆ ಅವರ ಮೇಲೆ ಆಗುತ್ತೆ. ಇವರ ಮೇಲೆ ಅವರ ಮೇಲೆ ಅಂತಾ ಏನಿಲ್ಲ. ಕಾನೂನಾತ್ಮಕವಾಗಿ ಏನು ಆಗಬೇಕು ಅದು ಆಗುತ್ತೆ. ಕಾನೂನು ಪ್ರಕಾರ, ಆವಾಗಾವಾಗ ದಾಳಿ ನಡೆಯುತ್ತದೆ ಎಂದರು.

IT ದಾಳಿ ಮಾಡೋದು ತಪ್ಪಾ?

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಹೈಕಮಾಂಡ್​ ಟಾರ್ಗೆಟ್ ಮಾಡಿದೆಯಾ ಎಂಬ ಪ್ರಶ್ನೆಗೆ‌‌ ಪ್ರತಿಕ್ರಿಯಿಸಿ, ಹಾಗಾದ್ರೆ IT ದಾಳಿ ಮಾಡೋದು ತಪ್ಪಾ? ನೀವು ಟಾರ್ಗೆಟ್ ಎಂದು ಬಿಂಬಿಸಿದ್ರೆ IT ದಾಳಿ ಮಾಡೋದೇ ತಪ್ಪು ಅನ್ನೋ ಹಾಗಾಗುತ್ತದೆ. ಕಾನೂನು ಪ್ರಕಾರ ಅದು ಅದರ ಕೆಲಸ ಮಾಡ್ತಿದೆ. ಇಲ್ಲಿ ಯಾರದ್ದು ತಪ್ಪು ಅಂತೈ ನಾನು ಹೇಳಲ್ಲ ಎಂದರು.

ಎಸ್‌ಟಿ ಮೀಸಲಾತಿ‌: ಎಸ್​ಟಿ‌ ಮೀಸಲಾತಿ‌ ಬಗ್ಗೆ ಮಾತನಾಡಿ, ಶೇ.7.5ರಷ್ಟು ಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧ ಇದೆ. ವಾಲ್ಮೀಕಿ ಜಯಂತಿ ಆಚರಣೆ ಮಾಡಿದ್ದು, ಬಿಜೆಪಿ ಸರ್ಕಾರದಲ್ಲಿ. ವಾಲ್ಮೀಕಿ ಭವನಗಳು ಆಗುತ್ತಿರೋದು ನಮ್ಮ ಸರ್ಕಾರದಲ್ಲಿ. ಮೀಸಲಾತಿಗೆ ಸ್ವಲ್ಪ ಕಾನೂನು ತೊಡಕಿದೆ.

ಅದನ್ನು ಸರಿ ಮಾಡಿಕೊಂಡು ಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧ ಎಂದರು. ಇನ್ನೂ 7.5 ಮೀಸಲಾತಿ ಕೊಡಲ್ಲ ಎಂದು ನಾವೆಲ್ಲೂ ಹೇಳಿಲ್ಲ. ಈಗಾಗಲೇ ನಾಗಮೋಹನ ದಾಸ ವರದಿ ಕೊಟ್ಟಿದ್ದಾರೆ.‌ ಇನ್ನೊಂದು ರಿಪೋರ್ಟ್ ಬರಬೇಕಿದೆ. ಆದಷ್ಟು ಬೇಗ ವರದಿ ತರಿಸಿಕೊಂಡು ಮೀಸಲಾತಿ ಕೊಡಲಾಗುವುದು ಎಂದರು.

ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಖಚಿತ :ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ. ನಾವೆಲ್ಲ ಹೋಗಿ ಪ್ರಚಾರ ಮಾಡುತ್ತೇವೆ. ಎರಡು ಕ್ಷೇತ್ರಗಳಲ್ಲಿ ನಾವೇ ಗೆಲುವು ಸಾಧಿಸುತ್ತೇವೆ ಎಂದರು.

ಇದನ್ನೂ ಓದಿ:ಕೋಡಿ ಬಿದ್ದಿದ್ದ ಕೆರೆಗಳನ್ನು ತುಂಬಿದ ಹೇಮಾವತಿ : ತುಮಕೂರು ರೈತರಲ್ಲಿ ಮನೆ ಮಾಡಿದ ಸಂತಸ

ಸಿದ್ದರಾಮಯ್ಯ ಅಧಿಕಾರಕ್ಕಾಗಿ ಬಹಳ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಪಂಜಾಬ್ ಮಾದರಿ ನಡೆಯುತ್ತಿದೆ. ಅಲ್ಲೂ ಸಿದ್ದು, ಇಲ್ಲೂ ಸಿದ್ದು. ಇಲ್ಲಿ ಸಿದ್ದರಾಮಯ್ಯ ಕ್ಯಾಪ್ಟನ್‌. ಪಂಜಾಬ್‌ನಲ್ಲಿ ದಲಿತ ಸಿಎಂ ಆಗಿದ್ದಾರೆ.

ಇಲ್ಲೂ ದಲಿತ ಸಿಎಂ ಕೂಗಿದೆ. ನವಜೋತ್ ಸಿಂಗ್ ಸಿಧು ಹಾಗೆಯೇ ಇಲ್ಲಿ ಸಿದ್ದರಾಮಯ್ಯ. ಮೊದಲು ಪಂಜಾಬ್ ಮಾಡೆಲ್ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ. ಕಾಂಗ್ರೆಸ್‌ನಲ್ಲಿ ಮೂವರು ಸಿಎಂ ಆಗಬೇಕೆಂದು ಹೊರಟಿದ್ದಾರೆಂದು ವ್ಯಂಗ್ಯವಾಡಿದರು.

ABOUT THE AUTHOR

...view details