ರಾಯಚೂರು:ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಲ್ಲಿ ಸಚಿವರ, ಶಾಸಕರ ಹಣೆಬರಹ ಏನು ಎಂಬುದು ನಾಳೆ ಗೊತ್ತಾಗಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಎಲ್ಲರ ಹಣೆಬರಹ ನಾಳೆ ಗೊತ್ತಾಗುತ್ತದೆ: ಸಚಿವ ಜಗದೀಶ್ ಶೆಟ್ಟರ್ - ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಂಬರುವ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ನಾನು ಅಭ್ಯರ್ಥಿಯಲ್ಲ. ಸುಖಾಸುಮ್ಮನೆ ನನ್ನ ಹೆಸರು ಹರಿದಾಡುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.
ಸಚಿವ ಜಗದೀಶ್ ಶೆಟ್ಟರ್
ಸಚಿವ ಸಂಪುಟ ವಿಸ್ತರಣೆ ಇಲ್ಲವೇ, ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ನನ್ನ ಸ್ಥಾನ ಸೇರಿ ಯಾರದ್ದು ಏನಾಗಲಿದೆ? ಜೊತೆಗೆ ಯಾರಿಗೆ ಸಚಿವ ಸ್ಥಾನ ಒಲಿಯುತ್ತದೆ. ಯಾರನ್ನು ಕೈ ಬಿಡಲಾಗುತ್ತದೆ ಎನ್ನುವುದು ಬುಧವಾರ ತಿಳಿಯುತ್ತದೆ ಎಂದರು.
ಇದನ್ನೂ ಓದಿ...ಸಂಪುಟ ಸೇರಲಿರುವ ಸಂಭಾವ್ಯ ಸಚಿವರ ಪಟ್ಟಿ ಇಂತಿದೆ!